ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು 4 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಫೆ. 26 ಕ್ಕೆ ಭಾನುವಾರ ದಿನ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯಲ್ಲಿ ಹಾಡಲು ಆಸಕ್ತಿ ಇರುವವರು ತಮ್ಮ ಹೆಸರು ನೋಂದಾಯಿಸಬಹುದಾಗಿದೆ . ಯಾವುದೇ ಗೀತೆಯನ್ನು ಪೂರ್ಣವಾಗಿ ಹಾಡಲು ಅವಕಾಶ ಮಾಡಿಕೊಡಲಾಗುವದು. ಕರೋಕೆ ಸಂಗೀತದಲ್ಲಿ ಹಾಡಬೇಕು. ಸಂಗೀತ ಇಲ್ಲದೆಯೂ ಹಾಡಬಹುದು. ಕಿರಿಯ ಗಾಯಕರು ಮತ್ತು ಹಿರಿಯ ಗಾಯಕರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಒಬ್ಬರಿಗೆ ಪ್ರವೇಶ ಶುಲ್ಕ 300 ಇರುತ್ತದೆ . ಭಾಗವಹಿಸಿದ ಪ್ರತಿಯೊಬ್ಬರಿಗೂ ಆಕರ್ಷಕ ಮೊಮೆಂಟೊ ಮತ್ತು ಪ್ರಶಂಸನಾ ಪತ್ರ ನೀಡಿ ಸತ್ಕರಿಸಲಾಗುವದು. ಅಂದು ಫೈನಲ್ ಸ್ಪರ್ಧೆಯ 6 ಜನ ಗಾಯಕರನ್ನು ನಿರ್ಣಾಯಕರು ಆಯ್ಕೆ ಮಾಡುತ್ತಾರೆ . ಫೈನಲ್ ಸಂಗೀತ ಸ್ಪರ್ಧೆಯನ್ನು ಅದೇ ಸಭಾಂಗಣದಲ್ಲಿ ದಿನಾಂಕ 5-3-2023 ರಂದು ಚಂದನ ಸಾಹಿತ್ಯ ವೇದಿಕೆ ವತಿಯಿಂದ ನಡೆಯುವ ರಾಜ್ಯಮಟ್ಟದ ಸಾಹಿತ್ಯ ಸಮಾರಂಭದಲ್ಲಿ ನಡೆಸಲಾಗುವದು . ಒಂದು ವಿನ್ನರ್ ಎರಡು ರನ್ನರ್ ಹಾಗೂ 3 ಸಮಾಧಾನಕರ ಬಹುಮಾನಗಳನ್ನು ಬಹುಮಾನಿತರಿಗೆ ನೀಡಿ ಗೌರವಿಸಲಾಗುವದು.
ಅಲ್ಲದೇ ವಿನ್ನರ್ ಮತ್ತು ರನ್ನರ್ ಅವರಿಗೆ ಸಂಗೀತದ ಬಿರುದು ಘೋಷಿಸಲಾಗುವದು. ಹೆಚ್ಚಿನ ಮಾಹಿತಿಗೆ 9845309239 ಈ ಸಂಖ್ಯೆಗೆ ಸಂಪರ್ಕಿಸಬೇಕೆಂದು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .