Ad Widget .

ಇದೆಂತಾ ಸ್ಟೇಟ್ ಮೆಂಟ್ ಮುತಾಲಿಕ್ ಜೀ? ಒಂದು ಹಿಂದೂ ಹುಡುಗಿ ಹೋದ್ರೆ ಹತ್ತು‌ ಮುಸ್ಲಿಂ ಹುಡುಗಿಯರನ್ನು ಹಾರಿಸ್ಬೇಕಂತೆ!!

ಸಮಗ್ರ ನ್ಯೂಸ್: ಛತ್ರಪತಿ ಶಿವಾಜಿ ಮಹಾರಾಜ್​ ಕೀ ಜೈ ಎನ್ನುತ್ತೀರಿ. ಆದರೆ ಮನೆಯಲ್ಲಿ ಒಂದು ಬಡಿಗೆ ಇಲ್ಲ, ಚಾಕು ಸಹ ಇಲ್ಲ. ಎಲ್ಲ ಹಿಂದೂಗಳು ಮನೆಯಲ್ಲಿ ಒಂದು ತಲವಾರ್ ಇಟ್ಟುಕೊಳ್ಳಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ಕೊಟ್ಟಿದ್ದಾರೆ. ಅಲ್ಲದೇ ಒಂದು ಹಿಂದೂ ಹುಡುಗಿ ಹೋದರೆ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ.

Ad Widget . Ad Widget .

ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ , . ನಟ್, ಸ್ಕ್ರೂ ಡ್ರೈವರ್, ಕಂಪಾಸು, ಸ್ಪಾನರು, ಸುಡುಗಾಡು, ಸಂತಿ ಪೂಜಾ ಮಾಡುತ್ತೀರಿ. ಶಸ್ತ್ರ ಅಂದರೆ ತಲವಾರ್, ಕತ್ತಿ, ಕುರುಪಿ, ಕೊಡಲಿ, ಚಾಕು. ಇವನ್ನೆಲ್ಲ ಇಟ್ರೆ ಪೊಲೀಸ್​ ಬಿಡ್ತಾರೇನ್ರೀ ಅಂತೀರಿ. ಪೊಲೀಸರು ಅರೆಸ್ಟ್ ಮಾಡೋದಾದರೆ ದುರ್ಗಾಮಾತೆ ಕೈಯಲ್ಲಿ ಹತ್ತು ಶಸ್ತ್ರಗಳಿವೆ, ಮೊದಲು ದುರ್ಗೆಯನ್ನು ಅರೆಸ್ಟ್ ಮಾಡಲಿ. ಹನುಮನ ಕೈಯಲ್ಲಿ ಗದೆ ಇದೆ, ಮೊದಲು ಹನಮಂತನ ಅರೆಸ್ಟ್ ಮಾಡಲಿ, ಈಶ್ವರನ ಕೈಯಲ್ಲಿ ತ್ರಿಶೂಲ ಇದೆ, ಈಶ್ವರನನ್ನು ಅರೆಸ್ಟ್ ಮಾಡಲಿ ಎಂದು ಹೇಳಿದರು.

Ad Widget . Ad Widget .

ಪ್ರತಿ ಹಿಂದೂ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಬೇಕು.ಆ ಖಡ್ಗ ತಲವಾರ್ ಹೊಡೆಯೋದಕ್ಕಲ್ಲ. ಗೋರಕ್ಷಣೆಗಾಗಿ, ನಮ್ಮ ಅಕ್ಕ-ತಂಗಿಯರ ರಕ್ಷಣೆಗಾಗಿ, ರಾಷ್ಟ್ರ ರಕ್ಷಣೆಗಾಗಿ, ಮಠಮಂದಿರಗಳ ರಕ್ಷಣೆಗಾಗಿ ಎಂದು ಮುತಾಲಿಕ್ ಹೇಳಿದ್ದಾರೆ.

ಇದೇ ವೇಳೆ ಲಬ್ ಜಿಹಾದ ವಿರುದ್ಧ ಗರಂ ಆದ ಮುತಾಲಿಕ್, ಇಲ್ಲಿದ್ದಂತಹ ತರುಣ ಶಕ್ತಿಗೆ ನಾನು ಆಹ್ವಾನ ಕೊಡುತ್ತೇನೆ. ಒಂದು ಹಿಂದೂ ಹುಡುಗಿ ಹೋದರೆ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ. ನಿಮಗೆ ರಕ್ಷಣೆ,ಉದ್ಯೋಗ ಎಲ್ಲ ಜವಾಬ್ದಾರಿ ನಮ್ಮದು ಎಂದ ಪ್ರಚೋದನಕಾರಿ ಹೇಳಿಕೆ ನೀಡಿದರು.

Leave a Comment

Your email address will not be published. Required fields are marked *