Ad Widget .

ಪಾಸ್ ಪೋರ್ಟ್ ವೆರಿಫಿಕೇಶನ್ ಈಗ ಇನ್ನಷ್ಟು ಸುಲಭ| ಹೊಸದೊಂದು ಸೌಲಭ್ಯ ಜಾರಿಗೊಳಿಸಿದ ವಿದೇಶಾಂಗ ಇಲಾಖೆ

ಸಮಗ್ರ ನ್ಯೂಸ್: ಪಾಸ್‌ಪೋರ್ಟ್ ವೆರಿಫಿಕೇಷನ್‌ಗಾಗಿ ಭಾರತ ಸರ್ಕಾರವು ದೆಹಲಿಯಲ್ಲಿ “ಎಂಪಾಸ್ ಪೋರ್ಟ್ ಸೇವಾ” (” mPassport”) ಎಂಬ ಹೊಸ ಆನ್‌ಲೈನ್ ಸರ್ವೀಸ್ ಸೇವೆಯನ್ನು ಪ್ರಾರಂಭಿಸಿದೆ.

Ad Widget . Ad Widget .

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೌಲಭ್ಯವನ್ನು ಆರಂಭಿಸಿದ್ದು, ಈ ಸೌಲಭ್ಯದ ಮೂಲಕ ಪಾಸ್ ಪೋರ್ಟ್ ಪರಿಶೀಲನೆ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

Ad Widget . Ad Widget .

ಈ ಹಿಂದೆ ಪಾಸ್ ಪೋರ್ಟ್ ಪರಿಶೀಲನೆಗಾಗಿ ಇದ್ದ 15 ದಿನಗಳ ಕಾಯುವಿಕೆ ಅವಧಿಯನ್ನು (ವೇಟಿಂಗ್ ಪಿರೀಯೆಡ್) ಇದು ಕಡಿಮೆ ಮಾಡುವುದಲ್ಲದೆ ಇದು ಜನರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಅನುಕೂಲಕರ ಹಾಗೂ ಸರಳವಾಗಿಸುತ್ತದೆ.

“mPassport ಸೇವಾ” ಸೌಲಭ್ಯವು ಆನ್ ಲೈನ್ ಸೇವೆಯಾಗಿದ್ದು ದೆಹಲಿಯ ನಿವಾಸಿಗಳು ಮೊಬೈಲ್, ಕಂಪ್ಯೂಟರ್ ಅಥವಾ ಟಾಬ್ಲೆಟ್ ಬಳಸಿಕೊಂಡು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಸೇವೆಯ ಬಳಕೆಯೂ ಸರಳವಾಗಿದೆ. ಬಳಕೆದಾರರು ಪಾಸ್ ಪೋರ್ಟ್ ಸೇವಾ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು.

ನಂತರ ಲಾಗಿನ್ ಮಾಡಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ಇದಾದ ಬಳಿಕ ಬಳಕೆದಾರರು ಅಗತ್ಯವಿರುವ ಮಾಹಿತಿಗಳನ್ನು ತುಂಬಿ, ನಿಗದಿಪಡಿಸಿದ ನಗದು ಪಾವತಿಸಿ, ಸ್ಥಳೀಯ ಪಾಸ್ ಪೋರ್ಟ್ ಸೆಂಟರ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕಾಗುತ್ತದೆ. ಅಪಾಯಿಂಟ್ ಮೆಂಟ್ ಕನ್ಫರ್ಮ್ ಆದ ಬಳಿಕ ಅದನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ಔಟ್ ಪ್ರತಿ ಹಾಗೂ ಅಗತ್ಯವಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಗದಿಯಾಗಿರುವ ಅಪಾಯಿಂಟ್ ಮೆಂಟ್ ವೇಳೆ ಕೊಂಡೊಯ್ಯಬೇಕು.

ಸದ್ಯ ಪ್ರಾಯೋಗಿಕ ಹಂತದಲ್ಲಿ ದೆಹಲಿಯಲ್ಲಿ ಎಂ-ಪಾಸ್ ಪೋರ್ಟ್ ಆ್ಯಪ್ ಸೌಲಭ್ಯ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.

Leave a Comment

Your email address will not be published. Required fields are marked *