Ad Widget .

ಚಾರ್ಮಾಡಿ ಘಾಟ್‌ನಲ್ಲಿ ತ್ಯಾಜ್ಯ ರಾಶಿ

ಸಮಗ್ರ ನ್ಯೂಸ್ : ಮಹಾಶಿವರಾತ್ರಿ ಹಿನ್ನಲೆಯಲ್ಲಿ ಧರ್ಮಸ್ಥಳಕ್ಕೆ ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮಾರ್ಗವಾಗಿ ಸಾವಿರಾರು ಭಕ್ತಾಗಳು ಪಾದಯಾತ್ರೆಯಲ್ಲಿ ಸಾಗಿದ್ದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬಾರಿ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ.
ಚಾರ್ಮಾಡಿ ಘಾಟ್‌ನಲ್ಲಿ ಭಕ್ತಾಗಳಿಗೆ ದಾನಿಗಳು ಅನ್ನದಾನ, ಕಲ್ಲಂಗಡಿ ಮುಂತಾದವುಗಳನ್ನು ನೀಡಿದ್ದು ಇದರ ಪರಿಣಾಮ ರಸ್ತೆ ಉದ್ದಕ್ಕೂ ಪ್ಲಾಸ್ಟಿಕ್ ತಟ್ಟೆ,ಪ್ಲಾಸ್ಟಿಕ್ ಲೋಟ, ನೀರಿನ ಬಾಟಲಿಗಳು ರಾಶಿ ಬಿದ್ದಿವೆ.

Ad Widget . Ad Widget .

ಚಾರ್ಮಾಡಿ ಘಾಟ್ ಉದ್ದಕ್ಕೂ ಕಸದ ಚೀಲಗಳನ್ನು ಅಳವಡಿಸಿದರೂ ಕೂಡ ತ್ಯಾಜ್ಯವನ್ನು ಕಸದ ಚೀಲಕ್ಕೆ ಹಾಕದೇ ಎಲ್ಲೆಂದರಲ್ಲಿ ಎಸೆದ ಪರಿಣಾಮ ತ್ಯಾಜ್ಯ ರಾಶಿ ರಸ್ತೆ ಬದಿಯ ಅರಣ್ಯ ಪ್ರದೇಶವನ್ನು ಸೇರುತ್ತಿದೆ.
ಚಾರ್ಮಾಡಿ ಘಾಟ್ ಮೂಲಕ ಹರಿದು ನೇತ್ರಾವತಿ ನದಿಯನ್ನು ಸೇರುವ ತೊರೆಗಳಿಗೂ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ಸೇರಿವೆ. ವನ್ಯಮೃಗಗಳು ಪ್ಲಾಸ್ಟಿಕ್ ಲೋಟ, ತಟ್ಟೆಗಳಲ್ಲಿರುವ ಆಹಾರ ತ್ಯಾಜ್ಯಗಳನ್ನು ತಿನ್ನುತ್ತಿದ್ದು ಪ್ಲಾಸ್ಟಿಕ್ ವನ್ಯಮೃಗಗಳ ಹೊಟ್ಟೆ ಸೇರುತ್ತಿದೆ.

Ad Widget . Ad Widget .

ಈ ವರ್ಷ ಪಾದಯಾತ್ರೆ ಪ್ರಾರಂಭವಾಗುವ ಮುಂಚಿತವಾಗಿಯೇ ಸ್ವಚ್ಛತೆ ನಿರ್ವಹಣೆಗಾಗಿ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕೈಗೊಂಡಿದ್ದು ಭಕ್ತಾಗಳ ನಿರ್ಲಕ್ಷö್ಯದಿಂದಾಗಿ ಸ್ವಚ್ಛತೆ ಕಾಪಾಡುವುದೇ ಸವಾಲಾಗಿ ಪರಿಣಮಿಸಿದೆ.

ತಂಡಗಳ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿ ಕಾರ್ಯಾಚರಣೆ ನಡೆಸಿ ಸ್ವಚ್ಛತೆ ನಿರ್ವಹಣೆ ಮಾಡಲಾಗಿದೆ. ಚಾರ್ಮಾಡಿ ಘಾಟ್‌ನಲ್ಲಿ ದಾನಿಗಳು ಊಟ, ಹಣ್ಣು ವಿತರಣೆ ಮಾಡಿ ತ್ಯಾಜ್ಯ ವಿಲೇವಾರಿಯನ್ನು ಮಾಡದೇ ಇರುವುದರಿಂದ ತ್ಯಾಜ್ಯ ಸಂಗ್ರಹವಾಗಿದೆ. ಮುಂದಿನ ವರ್ಷ ನಿರ್ದಿಷ್ಟ ಸ್ಥಳದಲ್ಲಿ ಊಟ ಉಪಹಾರ ಮುಂತಾದವುಗಳ ವಿತರಣೆಗೆ  ಅವಕಾಶ ಮಾಡಿಕೊಡಲಾಗುವುದು    
 -ಹರ್ಷಕುಮಾರ್, ತಾಲ್ಲೂಕು ಕಾರ್ಯ ನಿರ್ವಾಹಣಾಕಾರಿ ಮೂಡಿಗೆರೆ

ಪಾದಯಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ವಿಸಬೇಕು. ಈ ಬಾರಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಅತ್ಯಂತ ವ್ಯವಸ್ಥಿತವಾಗಿ ಸ್ವಚ್ಛತೆ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಆದರೆ ಪಾದಯಾತ್ರಿಗಳು ಕೂಡ ಸ್ವಚ್ಛತೆ ಕಾಪಾಡಲು ಸಹಕಾರ ನೀಡಬೇಕು*
               -ಸಾಗರ್ ತರುವೆ, ಗ್ರಾಮಸ್ಥರು

ವರದಿ: ಸಂತೋಷ್ ಅತ್ತಿಗೆರೆ

Leave a Comment

Your email address will not be published. Required fields are marked *