ಮಂಗಳೂರು: ಬಸ್ ಢಿಕ್ಕಿ- ವೃದ್ದೆ ಮೃತ್ಯು

ಸಮಗ್ರ ನ್ಯೂಸ್: ರಸ್ತೆ ದಾಟುತ್ತಿದ್ದ ವೃದ್ದೆಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಆಕಾಶಭವನದ ಆನಂದನಗರ ಸರ್ಕಲ್ ಸಮೀಪ ಗುರುವಾರ ಸಂಭವಿಸಿದೆ.

Ad Widget ... ..

ಮೃತರಾದವರನ್ನು ಆಕಾಶಭವನ ನಿವಾಸಿ ಶ್ರೀಮತಿ ಗೀತಾ (74 ವರ್ಷ) ಎಂದು ಗುರುತಿಸಲಾಗಿದೆ. ಬಸ್ಸು ಚಾಲಕ ವನೀಶ್ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಆಕಾಶಭವನ ಮುಖ್ಯ ರಸ್ತೆಯಲ್ಲಿ 4ನೇ ಮೈಲು ಕಡೆಯಿಂದ ಆನಂದನಗರ ಸರ್ಕಲ್ ಕಡೆಗೆ ರಸ್ತೆಯಲ್ಲಿ ಹಂಪ್ಸ್ ಇರುವ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗೀತಾ ಅವರಿಗೆ ಢಿಕ್ಕಿ ಹೊಡೆದಿದ್ದಾನೆ.

Ad Widget

ಪರಿಣಾಮ ಗೀತಾ ಅವರು ಡಾಮಾರು ರಸ್ತೆಯಲ್ಲಿ ಬಿದ್ದ ವೇಳೆ ಬಸ್ಸಿನ ಎದುರಿನ ಬಲ ಬದಿಯ ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *