Ad Widget .

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ

ಸಮಗ್ರ ನ್ಯೂಸ್: ಎಲ್ಲರೂ ಮದುವೆಯಾದ ಮೇಲೆ ಮಕ್ಕಳನ್ನು ಬಯಸುವುದು ಸಹಜ. ಆದರೆ ಕೆಲವರಿಗೆ ಅವರ ಬಯಕೆ ಈಡೇರುವುದಿಲ್ಲ. ಇಲ್ಲೊಬ್ಬ ಯುವಕನಿಗೂ ಹಾಗೆಯೇ ಆಗಿದ್ದು ಮದುವೆಯಾಗಿ ಐದು ವರ್ಷಗಳಾಗಿದ್ದು ಮಕ್ಕಳಾಗಿಲ್ಲ.

Ad Widget . Ad Widget .

ಈತನಿಗೆ ಮಕ್ಕಳಿಲ್ಲದ ಕೊರಗು ಬಾಧಿಸಿದ್ದು ಪತ್ನಿ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಧರ್ಮರಾಜು(28) ಎಂದು ಗುರುತಿಸಲಾಗಿದ್ದು ಈತ ಜಂಗಲ್ ರೆಸಾರ್ಟ್ ನ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Ad Widget . Ad Widget .

ಈತ ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್​ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಐದು ವರ್ಷಗಳಿಂದ ಮಕ್ಕಳಿಲ್ಲದ ಚಿಂತೆಯಲ್ಲಿದ್ದ ಧರ್ಮರಾಜು ದಂಪತಿ ದಿನ ದೂಡುತ್ತಿದ್ದರು. ಮಕ್ಕಳಾಗಿಲ್ಲ ಅನ್ನುವ ವಿಚಾರದಲ್ಲಿ ಪತಿ-ಪತ್ನಿ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇದೇ ಹಿನ್ನೆಲೆಯಲ್ಲ ಪತ್ನಿ ತವರಿಗೆ ತೆರಳಿದ್ದರು.

ಪತ್ನಿ ಇಲ್ಲದ ವೇಳೆ ಕರ್ತವ್ಯಕ್ಕೆ ರಜೆ ಹಾಕಿದ ಧರ್ಮರಾಜು, ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಅಹಸಜ ಸಾವಿನ ಬಗ್ಗೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *