Ad Widget .

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು| ತಾಯಿಯಿಂದ ಸಿಕ್ತು ಬಿಸಿಬಿಸಿ ಕಜ್ಜಾಯ! ಇಲ್ಲಿದೆ ವಿಡಿಯೋ

ಪ್ರೇಮಿಗಳ ದಿನ ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ನಡೆದದ್ದು ಮಾರಿಹಬ್ಬ…

Ad Widget . Ad Widget .

ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವೀಡಿಯೊವನ್ನು ಅವರ ನೆರೆಹೊರೆಯವರು ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಟೆರೇಸ್‌ಗೆ ಆಗಮಿಸುವ ತಾಯಿ ಮೂಲೆ ಮೂಲೆಯಲ್ಲಿ ಹುಡುಕಿ ಬಾಯ್‌ಫ್ರೆಂಡ್‌ನ್ನು ಕಂಡು ಹುಡುಕುತ್ತಾಳೆ. ನಂತರ ಕಾಲಿನಿಂದ ಚಪ್ಪಲಿಯನ್ನು ತೆಗೆದು ಆತನಿಗೆ ಸರಿಯಾಗಿ ಹೊಡೆಯುತ್ತಾಳೆ. ಆತ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಆ ತಾಯಿ ನಂತರ ಮಗಳನ್ನೂ ಕರೆದು ಅವಳಿಗೂ ಚಪ್ಪಲಿಯಲ್ಲಿ ಹೊಡೆಯುವುದನ್ನು ನೋಡಬಹುದು.

Ad Widget . Ad Widget .

ವೀಡಿಯೊವನ್ನು ಫೆಬ್ರವರಿ 14 ರಂದು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ‘ಆಂಟಿ, ಮಗಳ ವ್ಯಾಲೆಂಟೈನ್ಸ್ ಡೇ ಪ್ಲಾನ್‌ನ್ನು ಹಾಳು ಮಾಡಿದರು’ ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ವೀಡಿಯೋಗೆ 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಲಭಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಈ ತಾಯಿ ಶೀಘ್ರವೇ ತನ್ನ ಮಗಳಿಗೆ ಮದುವೆ ಮಾಡಿ ಕಳುಹಿಸುತ್ತಾರೆ ಎಂದಿದ್ದಾರೆ. ಇನ್ನು ಕೆಲವರು, ಸಿಂಗಲ್‌ ಆಗಿರುವವರು ಇದನ್ನು ನೋಡಿ ಖುಷಿ ಪಡಿ ಎಂದಿದ್ದಾರೆ. ಮತ್ತೊಬ್ಬರು ‘ಹುಡುಗನ ಸ್ನೇಹಿತನೇ ಈ ವಿಷಯವನ್ನು ಲೀಕ್ ಮಾಡಿರಬಹುದು’ ಎಂದು ಕಾಮೆಂಟಿಸಿದ್ದಾರೆ.

Leave a Comment

Your email address will not be published. Required fields are marked *