ಚಾರ್ಮಾಡಿ ಘಾಟ್: ಪಾದಯಾತ್ರಿಗಳಿಗೆ ಕುಡುಕನ ಕಾಟ

ಸಮಗ್ರ ನ್ಯೂಸ್:ಧರ್ಮಸ್ಥಳಕ್ಕೆ ಕೆಲ ದಿನಗಳಿಂದ ಸಾವಿರಾರು ಭಕ್ತಾಧಿಗಳು ಪಾದಯಾತ್ರೆಯಲ್ಲಿ ಸಾಗುತ್ತಿದ್ದು ಚಾರ್ಮಾಡಿ ಘಾಟ್ ನಲ್ಲಿ ಕುಡುಕನೊಬ್ಬ ಪಾದಯಾತ್ರಿಗಳಿಗೆ ಕಾಟ ಕೊಡುತ್ತಿದ್ದ ದೃಶ್ಯ ಕಂಡು ಬಂತು.

Ad Widget ... ..

ಚನ್ನರಾಯಪಟ್ಟಣ ಮೂಲದ ವ್ಯಕ್ತಿಯೊಬ್ಬ ಪಾದಯಾತ್ರೆ ನೆಪದಲ್ಲಿ ಬಂದು ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದ. ಪಾದಯಾತ್ರಿಗರು ಕುಡಿದು ಪಾದಯಾತ್ರೆಗೆ ಬಂದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡರು. ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಬದಿಯ ಪ್ರಪಾತಕ್ಕೆ ಕಾಲು ಜಾರಿ ಬೀಳುವ ಅಪಾಯವಿರುವುದರಿಂದ ಪಾನಮತ್ತನಾಗಿ ಚಾರ್ಮಾಡಿ ಘಾಟ್ ನಲ್ಲಿದ್ದ ವ್ಯಕ್ತಿಗೆ ಸ್ಥಳೀಯರು ಹಾಗೂ ಪಾದಯಾತ್ರಿಗರು ಬುದ್ದಿ ಹೇಳಿ ಕಳಿಸಿದರು.

Ad Widget

Leave a Comment

Your email address will not be published. Required fields are marked *