Ad Widget .

ಕೊಡಗು: ಕಳಚಿ ಬಿದ್ದ ಪಿಕಪ್ ವಾಹನದ ಟಯರ್| ಭಾರೀ ಅನಾಹುತದಿಂದ ಪಾರಾದ ಕಾರ್ಮಿಕರು

ಸಮಗ್ರ ನ್ಯೂಸ್: ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುವಾಗ ಪಿಕ್ ಅಪ್ ವಾಹನದ ಚಕ್ರ ಕಳಚಿದ ಘಟನೆ ಬೆಳಕಿಗೆ ಬಂದಿದೆ. ವಾಹನದ ಚಕ್ರ ಕಳಚಿದ ಪರಿಣಾಮ ಭಾರಿ ಅಪಘಾತದಿಂದ ಕಾರ್ಮಿಕರು ಪಾರಾಗಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಈ ಘಟನೆ ನಡೆದಿದೆ.

Ad Widget . Ad Widget .

ನಾಪೋಕ್ಲು ಸಮೀಪದ ಎಮ್ಮೆಮಾಡು ಕೂರುಳಿ ಗ್ರಾಮದಿಂದ ತೋಟದ ಮಾಲೀಕರೊಬ್ಬರು ಕೆಲಸಕ್ಕೆಂದು ಕಾರ್ಮಿಕರನ್ನು ಪಿಕ್ಅಪ್ ವಾಹನದಲ್ಲಿ ಸಾಗಿಸುತ್ತಿದ್ದಾಗ ವಾಹನದ ಆಕ್ಸಲ್ ತುಂಡಾದ ಪರಿಣಾಮ ಚಕ್ರ ಕಳಚಿಕೊಂಡು ಅವಘಡ ಸಂಭವಿಸಿದೆ.

Ad Widget . Ad Widget .

ವಾಹನದಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ದೃಶ್ಯ ನಾಪೋಕ್ಲುವಿನ ಆಟೋ ಚಾಲಕರೊಬ್ಬರ ಮೊಬೈಲ್ ನಲ್ಲಿ ಸೆರೆಸಿಕ್ಕಿದೆ. ಇದರಲ್ಲಿ ಪಿಕ್ ಅಪ್ ವಾಹನದ ಚಕ್ರ ಕಳೆಚುವ ದೃಶ್ಯ ಸೆರೆಯಾಗಿದ್ದು ಭಯಾನಕವಾಗಿದೆ. ಸುಮಾರು 20.ಮೀ ನಷ್ಟು ದೂರ ಚಲಿಸಿದ ವಾಹನವನ್ನು ಪಲ್ಟಿಯಾಗದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ನಿಯಂತ್ರಿಸಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ವಾಹನದಲ್ಲಿ ಸಣ್ಣಮಕ್ಕಳು ಸೇರಿದಂತೆ 15ಕ್ಕೂ ಅಧಿಕ ಕಾರ್ಮಿಕರಿದ್ದು ಅದೃಷ್ಟವಶಾತ್ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಕಾಫಿ, ಕಾಳುಮೆಣಸು ಕೊಯ್ಲು ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕಾರ್ಮಿಕರು ಆಗಮಿಸಿದ್ದು ತೋಟದ ಮಾಲೀಕರು, ಹಾಗೂ ಗೂಡ್ಸ್ ವಾಹನ ಸವಾರರು ತಮ್ಮ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾರೆ. ಗೂಡ್ಸ್ ವಾಹನಗಳಲ್ಲಿ ಜನರನ್ನು ಸಾಗಿಸುವುದು ಕಾನೂನು ಬಾಹಿರವಾಗಿದ್ದರು ನಿರಂತರವಾಗಿ ಇದು ನಡೆಯುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *