Ad Widget .

ಯಕ್ಷಗಾನ ಗಾರುಡಿಗ ಬಲಿಪ ನಾರಾಯಣ ಭಾಗವತ ಇನ್ನಿಲ್ಲ

ಸಮಗ್ರ ನ್ಯೂಸ್: ತೆಂಕುತಿಟ್ಟು ಯಕ್ಷ ರಂಗದ ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರು ಇಂದು(ಫೆ.16) ಸಂಜೆ ನಿಧನರಾದರು. ಇದರೊಂದಿಗೆ ಯಕ್ಷಲೋಕದಲ್ಲಿ ತನ್ನದೇ ಸ್ವರಸ್ಥಾಯಿ ನಿರ್ಮಿಸಿದ್ದ ಗಾನ ಕೋಗಿಲೆ ತನ್ನ ಹಾಡು ನಿಲ್ಲಿಸಿದೆ.

Ad Widget . Ad Widget .

ಗುರುವಾರ ಸಂಜೆ ಸುಮಾರು 6.30ರ ವೇಳೆಗೆ ಬಲಿಪ ನಾರಾಯಣ ಭಾಗವತರು ಅಸ್ತಂಗತರಾದರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅವರ ಅಂತಿಮ ವಿಧಿ ವಿಧಾನ ಇಂದು(ಫೆ.16) ತಡರಾತ್ರಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

Ad Widget . Ad Widget .

ಮೂಲತಃ ಯಕ್ಷಗಾನದ ತವರುನೆಲ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರಾದ ಅವರು ಮೂಡುಬಿದಿರೆ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಪಡ್ರೆಯಲ್ಲಿ 1938ರ ಏಪ್ರಿಲ್ 13ರಂದು ಜನಿಸಿದ ಅವರು ಯಕ್ಷಗಾನದ ಹಲವಾರು ಪ್ರಸಂಗಗಳನ್ನೂ ರಚಿಸಿದ್ದಾರೆ. ಬಲಿಪರು ಐದು ದಿನದ ದೇವೀ ಮಹಾತ್ಮೆ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದಾರೆ. ಇದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.

ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರು ತಮ್ಮ ಅಜ್ಜ ಯಕ್ಷಗಾನ ಭಾಗವತಿಕೆಯ ದಂತಕತೆ ದಿ.ಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತರು. ಬಳಿಕ 13 ನೇ ವರ್ಷದಲ್ಲಿ ಮೇಳಕ್ಕೆ ಸೇರ್ಪಡೆಯಾದರು.

ಇವರ ಪತ್ನಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಉತ್ತಮ ಭಾಗವತರಾಗಿದ್ದಾರೆ. ಇವರ ಮತ್ತೊಬ್ಬ ಪುತ್ರ ದಿ.ಪ್ರಸಾದ ಬಲಿಪರು ಸಹ ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷವಷ್ಟೇ ನಿಧನರಾಗಿದ್ದರು. ಇನ್ನೊಬ್ಬ ಪುತ್ರ ಶಶಿಧರ್ ಬಲಿಪ ಕೃಷಿಕರಾಗಿದ್ದಾರೆ.

ತೆಂಕು ತಿಟ್ಟು ಯಕ್ಷರಂಗದಲ್ಲಿ ಗುರುಸ್ಥಾನದಲ್ಲಿರುವ ಅವರ ಕಲಾಸೇವೆಯನ್ನು ಗುರುತಿಸಿ 2010ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಒಲಿದು ಬಂದಿತ್ತು. 20102ರಲ್ಲಿ ಸಾಮಗ ಪ್ರಶಸ್ತಿ, 2003ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ಪ್ರಶಸ್ತಿ', 2002ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ 2003ರಲ್ಲಿ ತಿ71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕರ್ನಾಟಕ ಶ್ರೀ ‘ಪ್ರಶಸ್ತಿ, 2002ರಲ್ಲಿ ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ’, 2002ರಲ್ಲಿ ಶೇಣಿ ಪ್ರಶಸ್ತಿ, 2002ರಲ್ಲಿ ಕವಿ ಮುದ್ದಣ ಪುರಸ್ಕಾರ, 2003ರಲ್ಲಿ ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, 2003ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾ, 2003ರಲ್ಲಿ ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, ಪಾರ್ತಿಸುಬ್ಬ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ಅವರಿಗೆ ಸಂದಿವೆ.

Leave a Comment

Your email address will not be published. Required fields are marked *