Ad Widget .

ಪೇಸ್ ಬುಕ್ ನಲ್ಲಿ ಸೋನಿಯಾ ಗಾಂಧಿ ಜೊತೆ‌ ನಗ್ನ ಬಾಲಿಕೆಯ‌ ನೆರಳಿನ ಪೋಟೋ ಹಂಚಿಕೊಂಡ ಸಂಬರಗಿ| ವ್ಯಾಪಕ ಟೀಕೆಗೊಳಗಾದ ಸಾಮಾಜಿಕ ಕಾರ್ಯಕರ್ತ

ಸಮಗ್ರ ನ್ಯೂಸ್: ಬಿಗ್​ಬಾಸ್​ ಖ್ಯಾತಿಯ ಪ್ರಶಾಂತ್​ ಸಂಬರಗಿ ಸುದ್ದಿಯಲ್ಲಿದ್ದು, ತಾನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಿಂದ ವೈರಲ್​ ಆಗಿದ್ದಾರೆ. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರ ಬಗ್ಗೆ ಹಂಚಿಕೊಂಡಿರುವ ಫೋಟೊದಿಂದ ಈಗ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Ad Widget . Ad Widget .

ಇವರ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಇನ್ನು ಕೆಲವರು ಬೈಗುಳದ ಸುರಿಮಳೆಯನ್ನೇ ಸುರಿಸಿದ್ದಾರೆ. ಅಂದ ಹಾಗೆಯೇ ಸಂಬರಗಿ ಹಂಚಿಕೊಂಡಿರುವ ಪೋಸ್ಟ್​ನಲ್ಲೇನಿದೆ?

Ad Widget . Ad Widget .

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಯಕ್ಟೀವ್​ ಆಗಿ ಇದ್ದಾರೆ. ಫೇಸ್​ಬುಕ್​ನಲ್ಲಿ ಸದಾ ಏನಾದರೊಂದು ಪೋಸ್ಟ್​ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆಯೇ ಬುಧವಾರದಂದು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಸೋನಿಯಾ ಗಾಂಧಿಯ ಅವರ ಎಡಿಟೆಡ್​ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಫೋಟೋದಲ್ಲಿ ಅಂಥದ್ದೇನಿದೆ.|?
ಫೋಟೋದಲ್ಲಿ ಸೋನಿಯಾ ಗಾಂಧಿ ಒಂದೆಡೆಯಾದರೆ. ಬ್ಯಾಕ್ ಗ್ರೌಂಡ್​ನಲ್ಲಿ ಶಿಲಾಬಾಲಿಕೆಯಂತೆ ಕಂಬದ ತಾಗಿ ನಿಂತಿರುವ ಮಹಿಳೆ ಕರಿನೆರಳಿನ ಚಿತ್ರಣವಿದೆ. ಈ ಫೋಟೋವನ್ನು ಫೇಸ್​​ಬುಕ್​ನಲ್ಲಿ ಹಂಚಿಕೊಂಡ ಪ್ರಶಾಂತ್​ ಸಂಬರಗಿ ಅವರು ”ನಾನು ಖಂಡಿಸುತ್ತೇನೆ” ಎಂದು ಅಡಿಬರಹ ಬರೆದಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗಿದೆ.

https://m.facebook.com/story.php?story_fbid=10160977705865712&id=771630711&mibextid=Nif5oz

Leave a Comment

Your email address will not be published. Required fields are marked *