Ad Widget .

ದೆಹಲಿಯಲ್ಲಿ ಮತ್ತೊಂದು ತಣ್ಣನೆಯ ಕೊಲೆ| ಗೆಳತಿಯ ಕೊಂದು ಪ್ರಿಡ್ಜ್ ನಲ್ಲಿ ಇರಿಸಿ ಅದೇ ದಿನ ಮತ್ತೊಬ್ಬಾಕೆಯ ಮದ್ವೆಯಾದ ಪಾತಕಿ

ಸಮಗ್ರ ನ್ಯೂಸ್: ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಲಿವ್‌ ಇನ್‌ ರಿಲೇಶನ್​​ಶಿಪ್​ನಲ್ಲಿದ್ದ ಯುವಕ ತನ್ನ ಸಂಗಾತಿಯನ್ನು ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದಾನೆ. ಅಲ್ಲದೇ ಅದೇ ದಿನವೇ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.

Ad Widget . Ad Widget .

ದೆಹಲಿ ಕ್ರೈಂ ಬ್ರಾಂಚ್ ಘಟಕದ ಪ್ರಕಾರ, ಆರೋಪಿಯನ್ನು ಸಾಹಿಲ್ ಗೆಹ್ಲೋಟ್ (24) ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಮೃತ ಯುವತಿಯನ್ನು ನಿಕ್ಕಿ ಯಾದವ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಕೆಲವು ವರ್ಷಗಳಿಂದ ರಿಲೇಶನ್​ಶಿಪ್​ನಲ್ಲಿದ್ದು, ಜೊತೆಯಾಗಿ ವಾಸವಿದ್ದರು.

Ad Widget . Ad Widget .

ಫೆಬ್ರವರಿ 9 ಮತ್ತು 10 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಸಾಹಿಲ್ ತನ್ನ ಕಾರಿನಲ್ಲಿ ಮೊಬೈಲ್‌ನ ಡೇಟಾ ಕೇಬಲ್‌ನಿಂದ ನಿಕ್ಕಿಯ ಕುತ್ತಿಗೆಯನ್ನು ಬಿಗಿದು ಕೊಂದಿದ್ದಾನೆ. ಮೃತದೇಹವನ್ನು ದೆಹಲಿಯ ಮಿತ್ರಾನ್ ಹಳ್ಳಿಯಲ್ಲಿರುವ ತನ್ನ ಧಾಬಾದಲ್ಲಿ ಇರಿಸಲಾಗಿದ್ದ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದಾನೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

ಸಾಹಿಲ್ ಮತ್ತು ನಿಕ್ಕಿ ಉತ್ತಮ್ ನಗರಕ್ಕೆ ತಮ್ಮ ಕೋಚಿಂಗ್ ಸೆಂಟರ್‌ಗಳಿಗೆ ಹೋಗುವಾಗ ಭೇಟಿಯಾಗುತ್ತಿದ್ದರು. ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. 2018 ರಲ್ಲಿ ಸಾಹಿಲ್ ಗ್ರೇಟರ್ ನೋಯ್ಡಾದ ಗಲ್ಗೋಟಿಯಾ ಕಾಲೇಜಿನಲ್ಲಿ ಡಿ ಫಾರ್ಮಾ ಕೋರ್ಸ್​ಗೆ ಪ್ರವೇಶ ಪಡೆದಿದ್ದು, ನಿಕ್ಕಿ ಅದೇ ಕಾಲೇಜಿನಲ್ಲಿ ಬಿಎ ಕೋರ್ಸ್​ಗೆ ಪ್ರವೇಶ ಪಡೆದಿದ್ದಳು. ಬಳಿಕ ಗ್ರೇಟರ್ ನೋಯ್ಡಾದಲ್ಲಿ ಇಬ್ಬರೂ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಅವರು ತಮ್ಮ ಮನೆಗಳಿಗೆ ಮರಳಿದರು ಮತ್ತು ಲಾಕ್‌ಡೌನ್ ಮುಗಿದ ನಂತರ ಮತ್ತೆ ದ್ವಾರಕಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.

ಈ ಸಂಬಂಧದ ಬಗ್ಗೆ ಸಾಹಿಲ್​​ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿರಲಿಲ್ಲ. ಅವನ ಮನೆಯವರು ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಅಂತಿಮವಾಗಿ ಡಿಸೆಂಬರ್ 2022 ರಲ್ಲಿ ಬೇರೊಂದು ಹುಡುಗಿಯ ಜೊತೆ ಆರೋಪಿಯ ನಿಶ್ಚಿತಾರ್ಥವಾಯಿತು. 2023ರ ಫೆಬ್ರವರಿ 9 ಮತ್ತು 10ಕ್ಕೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಈ ವಿಷಯ ನಿಕ್ಕಿಗೆ ತಿಳಿದ ಬಳಿಕ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಪ್ರಿಯತಮೆಯನ್ನು 35 ತುಂಡುಗಳಾಗಿ ಕತ್ತರಿಸಿದ ಘಟನೆ ಇಡೀ ದೇಶದಲ್ಲಿ ಕೋಲಾಹಲ ಎಬ್ಬಿಸಿತ್ತು. ಮಹಾರಾಷ್ಟ್ರದ ಪಾಲ್ಘರ್‌ ಮೂಲದ ಶ್ರದ್ಧಾ ವಾಕರ್ (27) ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಡೇಟಿಂಗ್ ಅಪ್ಲಿಕೇಶನ್ ಮೂಲಕ ಅಫ್ತಾಬ್ ಅಮೀನ್ ಪೂನಾವಲ್ಲಾ (28) ಹಾಗೂ ಶ್ರದ್ಧಾಗೆ ಪರಿಚಯವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಮುಂಬೈನಲ್ಲಿ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರ ತಿಳಿದ ಶ್ರದ್ಧಾ ಪೋಷಕರು ವಿರೋಧ ವ್ಯಕ್ತಪಡಿಸಿ ಜಗಳವಾಡಿದ್ದಾರೆ. ಹೀಗಾಗಿ ಅಫ್ತಾಬ್ ಹಾಗೂ ಶ್ರದ್ಧಾ ಮುಂಬೈ ತೊರೆದು ದೆಹಲಿಯಲ್ಲಿ ವಾಸಿಸುತ್ತಿದ್ದರು.

ಒಟ್ಟು ಮೂರು ವರ್ಷಗಳಿಂದ ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿದ್ದರು. ಇಬ್ಬರೂ ದೆಹಲಿಗೆ ಸ್ಥಳಾಂತರಗೊಂಡ ನಂತರ, ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. 2022ರ ಮೇ 18 ರಂದು ಇದೇ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿದೆ. ಆಕೆಯ ಕತ್ತು ಹಿಸುಕಿದ ಅಫ್ತಾಬ್, ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಹೊಸ ಫ್ರಿಡ್ಜ್​ ಖರೀದಿಸಿ ಅವಳ ದೇಹದ ಭಾಗಗಳನ್ನು ಅದರಲ್ಲಿ ಸಂಗ್ರಹಿಸಿಟ್ಟಿದ್ದಾನೆ. 18 ದಿನಗಳ ನಂತರ ರಾತ್ರಿ ಸಮಯದಲ್ಲಿ ಅದನ್ನು ಕಾಡು ಪ್ರದೇಶ ಸೇರಿದಂತೆ ಇತರೆಡೆ ಎಸೆದಿದ್ದನು.

Leave a Comment

Your email address will not be published. Required fields are marked *