Ad Widget .

ವುಮೆನ್ಸ್ ಪ್ರೀಮಿಯರ್ ಲೀಗ್| RCB ಗೆ ಸಾನಿಯಾ ಮೆಂಟರ್

ಸಮಗ್ರ ನ್ಯೂಸ್: ವುಮೆನ್ಸ್​ ಪ್ರಿಮಿಯರ್​ ಲೀಗ್​ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್​ ಹೊಸ ಹೊಸ ಮುಖಗಳನ್ನ ಪರಿಚಯ ಮಾಡುತ್ತಿದೆ. WPLನ ಹರಾಜು ಕಾರ್ಯಕ್ರಮದಲ್ಲಿ ಸ್ಮೃತಿ ಮಂಧಾನರನ್ನು ಭಾರೀ ಮೊತ್ತಕ್ಕೆ ಖರೀದಿಸಿ RCB ಸದ್ದು ಮಾಡಿತ್ತು. ಇದೀಗ ಬೆಂಗಳೂರು ತಂಡದ ಮೆಂಟರ್​ ಆಗಿ ದೀ ಫೇಮಸ್​ ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾರನ್ನು ಆಯ್ಕೆ ಮಾಡಿದೆ.

Ad Widget . Ad Widget .

ಆರು ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ವಿಜೇತೆಯಾಗಿರುವ ಸಾನಿಯಾ ಮಿರ್ಜಾ, ಕ್ಲಬ್‌ನ ಪ್ಲೇ ಬೋಲ್ಡ್‌ ಸಂಪ್ರದಾಯಕ್ಕೆ ಸೂಕ್ತವಾಗಿ ಒಗ್ಗಿಕೊಳ್ಳುತ್ತಾರೆ ಎಂದು ಕ್ಲಬ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget . Ad Widget .

ಭಾರತದಲ್ಲಿ ಮಹಿಳಾ ವಿಭಾಗದ ಕ್ರೀಡೆಗಳ ಶ್ರೇಷ್ಠ ತಾರೆ, ಯುವ ಐಕಾನ್, ತನ್ನ ವೃತ್ತಿಜೀವನದುದ್ದಕ್ಕೂ ಧೈರ್ಯದ ನಿರ್ಧಾರದ ಮೂಲಕ ಗಮನಸೆಳೆದವರು. ಮೈದಾನದ ಒಳಗೆ ಹಾಗೂ ಮೈದಾನದ ಹೊರಗೆ ಎದುರಿನ ಅಡೆತಡೆಗಳನ್ನು ದಾಟಿ ಚಾಂಪಿಯನ್‌ ಎನಿಸಿಕೊಂಡವರು.

ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಸಾನಿಯಾ ಮಿರ್ಜಾ ಅವರನ್ನು ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಆರ್‌ಸಿಬಿ ತನ್ನ ಟ್ವಿಟರ್‌ ಪೇಜ್‌ನಲ್ಲಿ ಬರೆದುಕೊಂಡಿದೆ.

Leave a Comment

Your email address will not be published. Required fields are marked *