Ad Widget .

ಕಾಸರಗೋಡು: ಹೈಟೆನ್ಷನ್ ತಂತಿ ಮೇಲೆ ಕುಸಿದ ಮಸೀದಿ ಗೋಪುರ| ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ರಸ್ತೆ ಅಗಲೀಕರಣಕ್ಕಾಗಿ ಮಸೀದಿ ಕೆಡವುವ ವೇಳೆ ಅಚಾತುರ್ಯ ನಡೆದಿದ್ದು, ವಿದ್ಯುತ್ ಹೈ ಟೆನ್ಶನ್ ತಂತಿ ಮೇಲೆ ಮಸೀದಿ ಗೋಪುರ ಉರುಳಿ ಬಿದ್ದ ಘಟನೆ ನಡೆದಿದೆ.

Ad Widget . Ad Widget .

ಕೇರಳದ ಕಾಸರಗೋಡು ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಜೆಸಿಬಿ ಮಸೀದಿಯ ಮೇಲ್ಭಾಗದ ಮಿನಾರ ತೆರವುಗೊಳಿಸುತ್ತಿದ್ದ ಸಂದರ್ಭ ನೇರವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ.

Ad Widget . Ad Widget .

ಉರುಳಿ ಬಿದ್ದ ರಭಸಕ್ಕೆ ತಂತಿಗಳು ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಹತ್ತಿರದ ಹತ್ತಾರು ಕಂಬಗಳು ಧರಶಾಹಿಯಾಗಿದೆ. ರಸ್ತೆಯಲ್ಲಿ ಓಡಾಡುತ್ತಿದ್ದ ಹತ್ತಾರು ವಾಹನಗಳ ಮಧ್ಯೆ ವಿದ್ಯುತ್ ಕಂಬಗಳು ಜಖಂ ಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಘಟನೆ ಬಳಿಕ ಕಾಸರಗೋಡು – ಚೆರ್ಕಳ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಮುಂಜಾಗ್ರತಾ ಕ್ರಮ ವಹಿಸದೇ ಮಾಡಿದ ಮಹಾ ಎಡವಟ್ಟು ಇದಾಗಿದೆ.

Leave a Comment

Your email address will not be published. Required fields are marked *