Ad Widget .

ಮೂರು ವರ್ಷದ ಮಗನ ಮುಂದೆ ಮತ್ತೊಮ್ಮೆ ಮದುವೆಯಾದ ಹಾರ್ದಿಕ್ ಪಾಂಡ್ಯ| ಸಾಂಪ್ರದಾಯಿಕ ಶೈಲಿಯಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನವಜೋಡಿ

ಸಮಗ್ರ ನ್ಯೂಸ್: ಅಭಿಮಾನಿಗಳ ಮನಗೆದ್ದಿರೋ ಟೀಂ ಇಂಡಿಯಾದ ಅದ್ಭುತ ಆಟಗಾರ ಹಾರ್ದಿಕ್ ಪಾಂಡ್ಯ ಸದ್ಯ ಕ್ರಿಕೆಟ್​ ಹೊರತಾಗಿ ಬೇರಯದೇ ವಿಷಯಕ್ಕೆ ಸುದ್ದಿಯಾಗ್ತಿದ್ದಾರೆ.

Ad Widget . Ad Widget .

ತಮ್ಮ ವೈಯಕ್ತಿಕ ಜೀವನದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಅರೆರೆ ಸೆಂಕೆಡ್​ ಇನ್ನಿಂಗ್ಸ್ ಅಂದ್ರೆ ಮತ್ತೊಂದು ಮದುವೆ ಆದ್ರಾ ಅಂತ ಕನ್ಪ್ಯೂಸ್​ ಆಗ್ಬೇಡಿ. ಇದು ಮತ್ತೊಂದು ಮದುವೆಯಲ್ಲ ಬದಲಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ.

Ad Widget . Ad Widget .

ಹಾರ್ದಿಕ್​ ಪಾಂಡ್ಯ ಮತ್ತು ನಟಾಶಾ ಸ್ಟಾಂಕೋವಿಕ್‌ ಜೋಡಿ ಮೂರು ವರ್ಷದ ಹಿಂದೆ ರಿಂಗ್​ ಬದಲಿಸಿಕೊಂಡು ಎಂಗೇಜ್​ ಮೆಂಟ್​ ಮಾಡಿಕೊಂಡಿದ್ರು. ಆದರೆ ಸಾಂಪ್ರದಾಯಿಕವಾಗಿ ಮದುವೆ ಆಗಿರಲಿಲ್ಲ. ಈ ಮಧ್ಯೆ ಜೋಡಿಗೆ ಗಂಡು ಮಗುವಿನ ಜನನ ಸಹ ಆಗಿತ್ತು. ಮಗ ಬೆಳೆದು ಅಂಬೆಗಾಲಿಡುತ್ತ ಮೂರು ವರ್ಷವೂ ಕಳೆದು ಹೋಗಿತ್ತು. ಆದರೆ ಸಾಂಪ್ರದಾಯಿಕವಾಗಿ ಮದುವೆ ಆಗಿಲ್ವಲ್ಲ ಅನ್ನೋ ಕೊರಗು ಈ ಜೋಡಿಗೆ ಕಾಡಿತ್ತು.

ಯಾರೇನೆ ಅನ್ನಲಿ ನಮ್ಮ ಆಸೆಯನ್ನು ಈಡೇರಿಸಿಕೊಳ್ಳಲೇ ಬೇಕು ಅಮತಾ ಪಣತೊಟ್ಟ ಹಾರ್ದಿಕ್​-ನಟಾಶಾ ಜೋಡಿ ಸಾಂಪ್ರದಾಯಿಕವಾಗಿ ಮಗ ಅಗಸ್ತ್ಯನ ಮುಂದೆ ಮದುವೆಯಾಗಿದ್ದಾರೆ. ರಾಜಸ್ಥಾನದ ಉದಯಪುರದ ಜೈಸಮಂದ್ ರೆಸಾರ್ಟ್​ನಲ್ಲಿ ಪ್ರೇಮಿಗಳ ದಿನದಂದೇ ಜೋಡಿ ವಿವಾಹವಾಗಿದ್ದಾರೆ. ಈ ಹಿಂದೆ ರಿಜಿಸ್ಟರ್​ ಮ್ಯಾರೇಜ್​ ಆಗಿದ್ದ ಹಾರ್ದಿಕ್​-ನಟಾಶಾ ಜೋಡಿ ನಿನ್ನೆ ಸಾಂಪ್ರದಾಯಿಕವಾಗಿ ಮದುವೆಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Leave a Comment

Your email address will not be published. Required fields are marked *