ಬಿಬಿಸಿ ದೆಹಲಿ ಕಚೇರಿ ಮೇಲೆ ಐಟಿ ರೈಡ್

ಸಮಗ್ರ ನ್ಯೂಸ್: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್ (BBC)ನ ದೆಹಲಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ.

Ad Widget ... ..

ಲಂಡನ್ ಮೂಲದ ಕಂಪನಿಯ ಮೇಲೆ ಕಚೇರಿ ಏಕೆ ದಾಳಿ ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ. ಕೆಲವು ವರದಿಗಳ ಪ್ರಕಾರ ಇಲಾಖೆಯು ಕಚೇರಿಗೆ ಬೀಗ ಜಡಿಯಬಹುದು ಎನ್ನಲಾಗುತ್ತಿದೆ.

Ad Widget

ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ಉದ್ಯೋಗಿಗಳ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ನೌಕರರನ್ನು ಕಚೇರಿ ಬಿಟ್ಟು ಬೇಗ ಮನೆಗೆ ತೆರಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *