Ad Widget .

ಮಹಿಳಾ ಐಪಿಎಲ್; ಆರ್ ಸಿಬಿ ಪಾಲಾದ ಸ್ಮ್ರತಿ ಮಂಧನಾ

ಸಮಗ್ರ ನ್ಯೂಸ್: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ನ ಹರಾಜು ಕಾರ್ಯಕ್ರಮ ನಡೆಯುತ್ತಿದ್ದು, ಮೊದಲ ಆಟಗಾರ್ತಿಯಾಗಿ ಸ್ಮೃತಿ ಮಂಧನಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಟೀಂ ಇಂಡಿಯಾ ಉಪನಾಯಕಿಯಾಗಿರುವ ಸ್ಮ್ರತಿ ಮಂಧನಾ ಅವರನ್ನು ಆರ್ ಸಿಬಿ ತಂಡವು 3.40 ಕೋಟಿ ರೂ. ಗೆ ಖರೀದಿ‌ ಮಾಡಿದೆ.

Ad Widget . Ad Widget .

ಆರ್‌ಸಿಬಿ ಸೇರಿಕೊಂಡ ಬೆನ್ನಲ್ಲೇ ಸ್ಮೃತಿ ಮಂಧಾನಾ ನಮಸ್ಕಾರ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡಿಗರಿಗೆ ಮಂಧಾನ ಮಾಡಿದ ಮೊದಲ ಟ್ವೀಟ್ ಇದೀಗ ಭಾರಿ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತ ಟ್ವಿಟರ್ ಖಾತೆ ಮೂಲಕ ಅದ್ಧೂರಿ ಸ್ವಾಗತ ಕೋರಿದೆ. ಈ ಟ್ವೀಟ್‌ ಪ್ರತಿಕ್ರಿಯೆ ನೀಡಿದ ಮಂಧಾನ, ನಮಸ್ಕಾರ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ.

Ad Widget . Ad Widget .

ಆರ್‌ಸಿಬಿ ತಂಡ ಅದ್ಧೂರಿಯಾಗಿ ಸ್ಮೃತಿ ಮಂಧಾನಗೆ ಸ್ವಾಗತ ನೀಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಂಧಾನಾಗೆ ಕನ್ನಡಿಗರು ಸ್ವಾಗತ ಕೋರಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ತಂಡ ಸೇರಿಕೊಂಡ ಮಂಧಾನಾಗೆ ಶುಭಕೋರಿದ್ದಾರೆ. ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಮಂಧಾನ ಇಂಗ್ಲೀಷ್ ಪದಗಳ ಮೂಲಕ ಕನ್ನಡದಲ್ಲೇ ಟ್ವೀಟ್ ಮಾಡಿರುವುದು ಇದೀಗ ಆರ್‌ಸಿಬಿ ಅಭಿಮಾನಿಗಳ ಸಂತಸ ಡಬಲ್ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಫ್ರಾಂಚೈಸಿ ಖರೀದಿಸಿದ ಆಟಗಾರ್ತಿಯರ ಪಟ್ಟಿ:
ಸ್ಮೃತಿ ಮಂಧಾನ: 3.4 ಕೋಟಿ ರೂಪಾಯಿ( ಆರ್‌ಸಿಬಿ)
ರಿಚಾ ಘೋಷ್: 1.9 ಕೋಟಿ ರೂಪಾಯಿ( ಆರ್‌ಸಿಬಿ
ರೇಣುಕಾ ಸಿಂಗ್: 1.5 ಕೋಟಿ ರೂಪಾಯಿ( ಆರ್‌ಸಿಬಿ
ಎಲ್ಲಿಸ್ ಪೆರಿ: 1.17 ಕೋಟಿ ರೂಪಾಯಿ( ಆರ್‌ಸಿಬಿ)
ಸೋಫಿ ಡಿವೈನ್: 50 ಲಕ್ಷ ರೂಪಾಯಿ( ಆರ್‌ಸಿಬಿ

Leave a Comment

Your email address will not be published. Required fields are marked *