ಸಮಗ್ರ ನ್ಯೂಸ್: ಇಂದಿನಿಂದ 5 ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಇಂದಿನಿಂದ 5 ದಿನಗಳ ಕಾಲ ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಕಲರವದ ರಂಗು ಇರಲಿದೆ. ಅಮೆರಿಕಾ, ಬ್ರಿಟನ್, ಇಸ್ರೇಲ್, ಇಟಲಿ, ಜಪಾನ್ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ.
699 ಭಾರತೀಯ ಪ್ರದರ್ಶಕರು, 110 ವಿದೇಶಿ ಪ್ರದರ್ಶಕರು, 25 ದೇಶಗಳ ರಕ್ಷಣಾ ಸಚಿವರು ಏರ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಐಎಎಫ್ ತೇಜಸ್ ದೇಸಿ ಸೂಪರ್ ಸಾನಿಕ್ ಫೈಟರ್ ಹೆಚ್ಚು ಹೈ ಲೈಟ್, ಆತ್ಮ ನಿರ್ಭರ್ ಪರಿಕಲ್ಪನೆಯ ಹೆಚ್ಎಎಲ್ ಹೆಲಿಕಾಪ್ಟರ್ಗಳ ಪ್ರದರ್ಶನವಾಗಲಿದ್ದು, ರಫೆಲ್ ಯುದ್ಧ ವಿಮಾನವು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಹೆಚ್ಎಎಲ್ ನಿರ್ಮಿತ HLFT-42 ಸೂಪರ್‌ಸಾನಿಕ್ ಜೆಟ್ ಕೂಡ ಪ್ರದರ್ಶನ ನೀಡಲಿದೆ. ಕೆಲ ದಿನಗಳಿಂದ ಏರೋ ಇಂಡಿಯಾ 2023 ಆವೃತ್ತಿಗೆ ಕಳೆದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ತಾಲೀಮು ನಡೆಸಿವೆ.
ಹಾಕ್ ಯುದ್ಧವಿಮಾನಗಳ ವೈಭವದ ಹಾರಾಟ ನಡೆಸಿದರೆ, ನೇತ್ರಾ ಯುದ್ಧವಿಮಾನಗಳು ಬಾನಂಗದಲ್ಲಿ ಚಿತ್ತಾರ ಮೂಡಿಸಿದವು. ಮಿಗ್-29, ಜಾಗ್ವಾರ್, ಸುಖೋಯ್ ವಿಮಾನಗಳ ವೈಮಾನಿಕ ಹಾರಾಟ ಆರಂಭವಾಗಿದೆ. ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಲೋಹದ ಹಕ್ಕಿಗಳ ಕಲರವಕ್ಕೆ ಅದ್ಧೂರಿ ಚಾಲನೆ ದೊರೆತಿದೆ.