Ad Widget .

ಕೊಡಗು – ಕೇರಳ ಗಡಿಯಲ್ಲಿ ಸಕ್ರಿಯಗೊಂಡ ನಕ್ಸಲರು| ಪೊಲೀಸರಿಂದ ಕೂಂಬಿಂಗ್ ಆರಂಭ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಕೇರಳ ಗಡಿ ಆರಳಂ ಗ್ರಾಮದಲ್ಲಿ ಮಹಿಳೆ ಸೇರಿದಂತೆ ಶಸ್ತ್ರಸಜ್ಜಿತ ಐವರು ನಕ್ಸಲರು ಕಾಣಿಸಿಕೊಂಡಿದ್ದಾರೆ. ಮನೆಯೊಂದರಲ್ಲಿ ಊಟ ಮಾಡಿ ಅಕ್ಕಿ, ಸಾಬೂನು, ಉಪ್ಪು ತೆಗೆದುಕೊಂಡು ಹೋಗಿರುವ ಘಟನೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಶುರು ಮಾಡಿದ್ದಾರೆ.

Ad Widget . Ad Widget .

ತಂಡದಲ್ಲಿ ನಕ್ಸಲರ ಕಬಿನಿ, ಬಾಣಾಸುರ ಗುಂಪುಗಳ ಸದಸ್ಯರು ಒಟ್ಟಾಗಿದ್ದರು ಎನ್ನಲಾಗಿದೆ. ಇದುವರೆಗೂ ಈ 2 ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದರು. 5 ತಿಂಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಏಕಾಏಕಿ 2 ಗುಂಪುಗಳ ಸದಸ್ಯರು ಒಟ್ಟಾಗಿ ಕಾಣಿಸಿಕೊಂಡಿದ್ದು ನಕ್ಸಲ್ ನಿಗ್ರಹ ಪಡೆಯ ಅಚ್ಚರಿಗೆ ಕಾರಣವಾಗಿದೆ.

Ad Widget . Ad Widget .

ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಪೊಲೀಸರು ಕೊಡಗಿನ ಕುಟ್ಟ, ಆರ್ಜಿ ಸೇರಿದಂತೆ ಗಡಿ ಭಾಗಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ.

Leave a Comment

Your email address will not be published. Required fields are marked *