Ad Widget .

ವ್ಯಾಲಂಟೈನ್ ಡೇ ದಿನ ಮರುಮದುವೆ ಆಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಸಮಗ್ರ ನ್ಯೂಸ್: ಟೀಂ ಇಂಡಿಯಾದ ಆಟಗಾರ ಹಾರ್ದಿಕ್​ ಪಾಂಡ್ಯ​ ಮರು ಮದುವೆಯಾಗಲು ಮುಂದಾಗಿದ್ದಾರೆ. ವ್ಯಾಲೆಂಟೈನ್ಸ್​ ಡೇ ದಿನ‌ ಅವರು ಮದುವೆಯಾಗಲಿದ್ದಾರಂತೆ. ಅಂದ ಹಾಗೆಯೇ, ಪ್ರೇಮಿಗಳ ದಿನಾಚರಣೆಗೆ ಒಂದೇ ದಿನ ಬಾಕಿ ಇದ್ದು, ಫೆಬ್ರವರಿ 13ರಂದು ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬಂದಿದೆ.

Ad Widget . Ad Widget .

ಹಾರ್ದಿಕ್ ಪಾಂಡ್ಯ ಬಾಲಿವುಡ್​ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಪ್ರೀತಿಸಿ ಬಳಿಕ ಗಂಡು ಮಗುವಿಗೆ ತಂದೆಯಾದ ಬಗ್ಗೆ ತಿಳಿದೇ ಇದೆ. ಅದರೀಗ ಮರು ಮದುವೆಯಾಗಲು ಈ ಕ್ರಿಕೆಟಿಗ ಮುಂದಾಗಿದ್ದಾರೆ. ಅಂದ ಹಾಗೆ ವಧು ಯಾರು ಗೊತ್ತಾ?.

Ad Widget . Ad Widget .

ಹಾರ್ದಿಕ್​ ಪಾಂಡ್ಯ ಅವರು ಯಾಚ್​ನಲ್ಲಿ ನತಾಶಾ ಸ್ಟಾಂಕೋವಿಕ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ಬಳಿಕ ವಿವಾಹವಾಗದೆ ಒಟ್ಟಿಗೆ ಜೀವಿಸಲು ಶುರು ಮಾಡಿದರು. ಬಳಿಕ ಈ ಜೋಡಿ ಅಗಸ್ತ್ಯ ಎಂಬ ಮುದ್ದಾದ ಗಂಡು ಮಗುವಿನ ಪೋಷಕರಾದರು. ಆದರೀಗ ಈ ಜೋಡಿ ಮರು ಮದುವೆಯಾಗುತ್ತಿದ್ದಾರಂತೆ. ಹಾರ್ದಿಕ್​ ಮತ್ತೊಮ್ಮೆ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಾರ್ದಿಕ್​ ಪಾಂಡ್ಯ ವಿವಾಹವು ಫೆಬ್ರವರಿ 13ರಿಂದ ಪ್ರಾರಂಭವಾಗಿ ಫೆಬ್ರವರಿ 16ರವರೆಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹರಿದಾಡುತ್ತಿರುವ ಮಾಹಿತ ಪ್ರಕಾರ, ಹಾರ್ದಿಕ್ ಮತ್ತು ನತಾಶಾ ಸ್ಟಾಂಕೋವಿಕ್ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಕಳೆದ ನವೆಂಬರ್​ನಲ್ಲಿಯೇ ಇದರ ಸಿದ್ಧತೆಗಳು ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *