ಡಿಕೆ ಬ್ರದರ್ಸ್ ನ ಹಾಡಿ ಹೊಗಳಿದ ಸಚಿವ ಡಾ.ಸುಧಾಕರ್

ಸಮಗ್ರ ನ್ಯೂಸ್: ಕನಕಪುರದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಅಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಾಡಿ ಹೊಗಳಿದ್ದಾರೆ.

Ad Widget ... ..

ರಾಮನಗರ ಜಿಲ್ಲೆಯ ಕನಕಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಡಿ.ಕೆ.ಶಿವಕುಮಾರ್ ಅವರು ಯಾಕೆ ಗೆಲ್ಲುತ್ತಾರೆ ಅಂತಾ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಮೊದಲು ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುತ್ತಿದ್ದರು. ಬರುಬರುತ್ತಾ ಡಿ.ಕೆ. ಶಿವಕುಮಾರ್ ಗೆಲುವಿನ ಅಂತರ 75 ಸಾವಿರ ದಾಟಿದೆ. ನರೇಗಾದಲ್ಲಿ ಕೆಪಿಸಿಸಿ ಅಧ್ಯಕ ಡಿ.ಕೆ.ಶಿವಕುಮಾರ್ ಒಂದು ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.

Ad Widget

ಇನ್ನು ಸಂಸದ ಡಿ.ಕೆ. ಸುರೇಶ್ ಯಾವಾಗ ನಿದ್ದೆ ಮಾಡ್ತಾರೋ ಗೊತ್ತಿಲ್ಲ. ಕನಕಪುರಕ್ಕೆ ಮೂರು ಕಣ್ಣು ಇದೆ ಅಂತಾ ಕೆಲವರು ಹೇಳುತ್ತಾರೆ. ಯಾರು ಅಂದ್ರೆ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಎಂದು ಡಾ. ಸುಧಾಕರ್ ಹಾಡಿ ಹೊಗಳಿದ್ದಾರೆ.

Leave a Comment

Your email address will not be published. Required fields are marked *