Ad Widget .

ಟರ್ಕಿ‌ ಭೂಕಂಪ; ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಬದುಕುಳಿದ ಬಾಲಕ

ಸಮಗ್ರ ನ್ಯೂಸ್: ಟರ್ಕಿಯ ಭೀಕರ ಭೂಕಂಪದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಹಲವರನ್ನು ರಕ್ಷಿಸಲಾಗುತ್ತಿದೆ. 94‌ ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿದ್ದ ಅದ್ನಾನ್ ಮುಹಮ್ಮದ್ ಕೊರ್ಕುಟ್ ಎಂಬ 17 ವರ್ಷದ ಬಾಲಕನನ್ನು ರಕ್ಷಣಾ ತಂಡಗಳು ರಕ್ಷಿಸಿದ್ದು, ಆತನ ಕರುಣಾಜನಕ ಕತೆಯನ್ನು ಮಾಧ್ಯಮಗಳು ವರದಿ ಮಾಡಿದೆ.

Ad Widget . Ad Widget .

ಸುಮಾರು 94 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಆತ ತನ್ನ ಕುಟುಂಬದ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಆತ ತನ್ನ ಸ್ವಂತ ಮೂತ್ರವನ್ನು ಕುಡಿದು ಬದುಕಿದ್ದೇನೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ.

Ad Widget . Ad Widget .

“ನಿದ್ರೆಗೆ ಜಾರದಿರಲು ನಾನು ಪ್ರತಿ 25 ನಿಮಿಷಗಳಿಗೊಮ್ಮೆ ನನ್ನ ಫೋನ್‌ನಲ್ಲಿ ಅಲಾರಾಂ ಆಗುವಂತೆ ಹೊಂದಿಸಿದ್ದೆ. ಆದರೆ, ಎರಡು ದಿನಗಳ ನಂತರ, ಬ್ಯಾಟರಿ ಖಾಲಿ ಆಗಿ ಫೋನ್‌ ಆಫ್‌ ಆಯಿತು” ಎಂದು ಆತ ಹೇಳಿದ್ದಾನೆ.

‘ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ, ನನಗೆ ಧ್ವನಿಗಳು ಕೇಳಿಸುತ್ತಿದ್ದವು, ಆದರೆ ಯಾರಿಗೂ ನನ್ನ ಮಾತು ಕೇಳುತ್ತಿರಲಿಲ್ಲ. ಇದು ತನ್ನನ್ನು ಚಿಂತೆಗೀಡು ಮಾಡುತ್ತಿತ್ತು. ರಕ್ಷಣಾ ಪ್ರಯತ್ನಗಳ ಸಮಯದಲ್ಲಿ ನಾನು ನಜ್ಜುಗುಜ್ಜಾಗಬಹುದೆಂದು ನಾನು ಹೆದರುತ್ತಿದ್ದೆ. ಬಂದು ನನ್ನನ್ನು ರಕ್ಷಿಸಿದ ಜನರಿಗೆ ಧನ್ಯವಾದಗಳು” ಎಂದು ಆತ ಹೇಳಿಕೊಂಡಿದ್ದಾನೆ.

Leave a Comment

Your email address will not be published. Required fields are marked *