Ad Widget .

ಸುಳ್ಯ: ನದಿಯಲ್ಲಿ ಮುಳುಗಿ ಯುವಕರಿಬ್ಬರು ದುರ್ಮರಣ

ಸಮಗ್ರ ನ್ಯೂಸ್: ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯ ನಗರ ಸಮೀಪದ ದೊಡ್ಡೇರಿಯಲ್ಲಿ ನಡೆದಿದೆ.

Ad Widget . Ad Widget .

Ad Widget . Ad Widget .

ಸ್ಥಳೀಯರು ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು. ಮೃತದೇಹಗಳನ್ನು ಸರಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡ್ಡೇರಿಯವರೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಈಜಲೆಂದು ಇಳಿದಿದ್ದರು.

ಅವರಲ್ಲೋರ್ವ ನೀರುಪಾಲಾದಾಗ ರಕ್ಷಿಸಲು ಹೋದ ಮತ್ತೊಬ್ಬ ಕೂಡಾ ನೀರಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ಮೃತಪಟ್ಟವರನ್ನು ಕೌಡಿಚ್ಚಾರಿನ ಜಿತೇಶ್ ಹಾಗೂ ಪ್ರವೀಣ್ ಎಂದು ಗುರುತಿಸಲಾಗಿದೆ.

ಮೃತ ಪ್ರವೀಣ್ ಕೌಡಿಚಾರಿನ ಅಂಬಟೆಮೂಲೆ ಕೃಷ್ಣಪ್ಪ ನಾಯಕ್ ಮಗನಾಗಿದ್ದು, ಜಿತೇಶ್ ದೇರಳೆ ನಿವಾಸಿ ನಾರಾಯಣ ಅವರ ಪುತ್ರ. ಇವರಿಬ್ಬರೂ ಯಂತ್ರದಲ್ಲಿ ಕಾಡು ಕಡಿಯುವ ಕೆಲಸ ಮಾಡುತ್ತಿದ್ದು, ಶನಿವಾರ ಕೆಲಸಕ್ಕೆ ರಜೆ ಇದ್ದುದರಿಂದ ಗೆಳೆಯರೊಂದಿಗೆ ಸುಳ್ಯಕ್ಕೆ ಬಂದಿದ್ದರು.

Leave a Comment

Your email address will not be published. Required fields are marked *