ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಅಸ್ತ್ರ ಮುಂದಿಟ್ಟು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಲಿಂಗಾಯಿತ ಸಮುದಾಯದ ಮತಗಳನ್ನು ಚದುರಿಸುವ ಭಾರಿ ರಣತಂತ್ರ ಹೂಡಿದ್ದರು.
ಆದರೆ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬ್ರಾಹ್ಮಣ ಸಿಎಂ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮುಂದಿನ ಬಾರಿಯೂ ಬಸವರಾಜ್ ಬೊಮ್ಮಾಯಿ ನಾಯಕತ್ವದಲ್ಲೇ ಬಿಜೆಪಿ ಮುಂದುವರಿಯಲಿದೆ ಅನ್ನೋ ಸುಳಿವನ್ನು ಅಮಿತ್ ಶಾ ನೀಡಿದ್ದಾರೆ. ಭಾಷಣದ ಅಂತ್ಯದಲ್ಲಿ ಬೊಮ್ಮಾಯಿ ಕೈ ಬಲಪಡಿಸಿ ಅನ್ನೋ ಸೂಚನೆ ನೀಡಿದ್ದಾರೆ. ಬೊಮ್ಮಾಯಿ ನಾಯಕತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಲಿಂಗಾಯಿತ ಸಮುದಾಯಕ್ಕೆ ಮತ್ತೆ ಸಿಎಂ ಪಟ್ಟ ಅನ್ನೋದನ್ನು ಪರೋಕ್ಷವಾಗಿ ನೀಡಿದ್ದಾರೆ.
ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಂಡ ಅಮಿತ್ ಶಾ, ರಾಜ್ಯ ರಾಜಕಾರಣದ ಹಲವು ವಿವಾದಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬ್ರಾಹ್ಮಣ ಸಿಂ, ಪೇಶ್ವೇ, ಗೋಡ್ಸೆ ಡಿಎನ್‌ಎ ಹೊಂದಿದವರನ್ನು ಸಿಎಂ ಮಾಡುಲ ಆರ್‌ಎಸ್‌ಎಸ್ ಮುಂದಾಗಿದೆ ಎಂದು ಮಾಜಿ ಸಿಎಂ ಹೆಚ್‌ಜಿ ಕುಮಾರಸ್ವಾಮಿ ಹೇಳಿದ್ದರು. ಆರಂಭದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ಎಂಬಂತೆ ಬಿಂಬಿತವಾಗಿದ್ದರೂ, ಇದರ ರಾಜಕೀಯ ತಂತ್ರಗಾರಿಕೆ ಲಿಂಗಾಯಿತ ಸಮುದಾಯ ಮತ ಚದುರಿಸುವ ಮಾಸ್ಟರ್ ಪ್ಲಾನ್ ಅಡಗಿತ್ತು ಅನ್ನೋದು ಬಳಿಕ ಬಹಿರಂಗವಾಗಿತ್ತು.