Ad Widget .

ಕಬಡ್ಡಿ ಆಟದ ವೇಳೆ ಕೋರ್ಟ್ ನಲ್ಲೇ ಪ್ರಾಣಬಿಟ್ಟ ಆಟಗಾರ| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಕಬಡ್ಡಿ ಆಡಲು ಹೋದ ಆಟಗಾರ ಶವವಾಗಿ ಮನೆಗೆ ಬಂದ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು , ಈ ವಿಡಿಯೋ ವೈರಲ್ ಆಗಿದೆ.

Ad Widget . Ad Widget .

ಮುಂಬೈನ ಮಲಾದ್​​ನಲ್ಲಿ ಕಬಡ್ಡಿ ಟೂರ್ನಮೆಂಟ್ ನಡೆದಿತ್ತು. ಈ ಪಂದ್ಯಾಟದ ವೇಳೆ ಆಟಗಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವಂತೆ, ಸಾವನ್ನಪ್ಪಿರುವ ಆಟಗಾರ ಮೊದಲು ಎದುರಾಳಿ ತಂಡದ ಮೇಲೆ ರೈಡ್ ಮಾಡಲು ಮುಂದಾಗಿದ್ದ.

Ad Widget . Ad Widget .

ಈ ವೇಳೆ ಎದುರಾಳಿ ತಂಡದವರು ಆತನನ್ನು ಔಟ್ ಮಾಡಿದ್ದಾರೆ. ನಂತರ ಕೋಟ್ ನಿಂದ ಹೊರ ಹೋಗುವಾಗ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

Leave a Comment

Your email address will not be published. Required fields are marked *