Ad Widget .

ಸ್ಕಿಡ್ ಆಗಿ ಬಿದ್ದ ಬೈಕ್ ಸವಾರನ ಮೇಲೆ ಹರಿದ‌ ಅಪರಿಚಿತ ವಾಹನ| ವಿಟ್ಲದ ಯುವಕ ಸ್ಪಾಟ್ ಡೆತ್

ಸಮಗ್ರ ನ್ಯೂಸ್: ರಾ.ಹೆ.75ರ ಅಡ್ಯಾರ್ ಕಟ್ಟೆಯ ಬಳಿ ಶುಕ್ರವಾರ ರಾತ್ರಿ ಸ್ಕಿಡ್‌ ಆಗಿ ಬಿದ್ದ ಬೈಕ್ ಸವಾರನ ಮೇಲೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

Ad Widget . Ad Widget .

ಮೃತಪಟ್ಟ ಬೈಕ್ ಸವಾರನನ್ನು ವಿಟ್ಲ ಸಮೀಪದ ಮಾಣಿಲ ಗ್ರಾಮದ ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾಣಿ ಮತ್ತು ಸುಧಾಮಣಿ ದಂಪತಿಯ ಪುತ್ರ ಕಾರ್ತಿಕ್ ಮಣಿಯಾಣಿ (24) ಎಂದು ಗುರುತಿಸಲಾಗಿದೆ.

Ad Widget . Ad Widget .

ಮಂಗಳೂರು ನಗರದಲ್ಲಿ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಕಾರ್ತಿಕ್ ತನ್ನ ಮನೆಗೆ ತೆರಳುತ್ತಿದ್ದಾಗ ಶುಕ್ರವಾರ ರಾತ್ರಿ ಸುಮಾರು 9:55ಕ್ಕೆ ಅಡ್ಯಾರ್ ಕಟ್ಟೆಯ ಬಳಿ ಅಪಘಾತಕ್ಕೀಡಾದರು. ಕಾರ್ತಿಕ್ ಸವಾರಿ ಮಾಡುತ್ತಿದ್ದ ಬೈಕ್ ಸ್ಕಿಡ್ಡಾಗಿ ರೋಡ್ ಡಿವೈಡರ್‌ಗೆ ತಾಗಿ ಬಿದ್ದರು. ಅಷ್ಟರಲ್ಲಿ ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಯಾವುದೋ ಅಪರಿಚಿತ ವಾಹನವು ಹರಿದ ಪರಿಣಾಮ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *