Ad Widget .

ನೆಹರೂ ಹೆಸರನ್ನು ಸರ್ ನೇಮ್ ಅಲ್ಲಿ ಯಾಕೆ ಬಳಸಲ್ಲ ಎಂದ ಮೋದಿ| ಪ್ರಧಾನಿ ಮೋದಿಗೆ ಭಾರತೀಯ ಸಂಸ್ಕೃತಿಯ ಕನಿಷ್ಠ ತಿಳುವಳಿಕೆಯೂ ಇಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ

ಸಮಗ್ರ ನ್ಯೂಸ್: ರಾಜ್ಯಸಭೆಯಲ್ಲಿ ಗಾಂಧಿಗಳು ನೆಹರೂ ಹೆಸರನ್ನು ಬಳಸುವುದಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷ ಕಾಂಗ್ರೆಸ್, ಭಾರತದಲ್ಲಿ ಯಾರಾದರೂ ತಮ್ಮ ತಾಯಿಯ ಅಜ್ಜನ ಸರ್ನೇಮ್ ಅನ್ನು ಬಳಸುತ್ತಾರೆಯೇ?ಎಂದು ಪ್ರಶ್ನಿಸಿದೆ.

Ad Widget . Ad Widget .

ಪ್ರಧಾನಿ ಮೋದಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಕನಿಷ್ಟ ತಿಳುವಳಿಕೆಯೂ ಇಲ್ಲ. ದೇಶವನ್ನು ದೇವರೇ ಕಾಪಾಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರು, ನೆಹರೂ ಸರ್ ನೇಮ್ ಬಳಸುವುದಕ್ಕೆ ಗಾಂಧಿಗಳು ಏಕೆ ನಾಚಿಕೆಪಡುತ್ತಾರೆ ಎಂದು ಪ್ರಶ್ನಿಸಿದರು.

Ad Widget . Ad Widget .

ಈ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲಾ ಅವರು, “ಪ್ರಧಾನಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರಿಗೆ ಭಾರತದ ಸಂಸ್ಕೃತಿಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಪ್ರಧಾನಿ ಹೇಳಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೀವು ದೇಶದ ಯಾವುದೇ ವ್ಯಕ್ತಿಯನ್ನೂ ಕೇಳಿ, ಯಾರಾದರೂ ತಾಯಿಯ ಅಜ್ಜನ ಉಪನಾಮವನ್ನು ತಮ್ಮ ಹೆಸರಿನ ಮುಂದೆ ಬಳಸುತ್ತಾರೆಯೇ?. ಭಾರತೀಯ ಸಂಸ್ಕೃತಿಯಲ್ಲಿ ಯಾರೂ ತಾಯಿಯ ಅಜ್ಜನ ಉಪನಾಮವನ್ನು ಬಳಸುವುದಿಲ್ಲ, ಮೋದಿಯವರಿಗೆ ಇದನ್ನ ಅರ್ಥಮಾಡಿಕೊಳ್ಳುವಷ್ಟು ಸಾಮಾನ್ಯ ತಿಳುವಳಿಕೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಜವಾಹರ್​ ಲಾಲ್​ ನೆಹರೂ ಅವರು ದೇಶದ ಮೊದಲ ಪ್ರಧಾನಮಂತ್ರಿ, ಅವರೊಬ್ಬ ಶ್ರೇಷ್ಠ ವ್ಯಕ್ತಿ, ಆದರೂ ಅವರ ಕುಟುಂಬ ಹಾಗೂ ಪಕ್ಷದವರೂ ಅವರ ಸರ್ ನೇಮ್ ಎಲ್ಲೂ ಬಳಸುವುದಿಲ್ಲ ಎಂದು ಹೇಳಿದ್ದರು.

Leave a Comment

Your email address will not be published. Required fields are marked *