Ad Widget .

ನಂದಿನಿ ಈಗ ಮತ್ತಷ್ಟು ತುಟ್ಟಿ| ಹಾಲಿನ ದರ ₹3 ಹೆಚ್ಚಿಸಿ‌ ಕೆಎಂಎಫ್ ಆದೇಶ

ಸಮಗ್ರ ನ್ಯೂಸ್: ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ನಿಂದ ಹೆಚ್ಚಳ ಮಾಡಲಾಗಿತ್ತು. ಈಗ ನಂದಿನಿ ಜಂಬೋ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಿ ಆದೇಶಿಸಿದೆ.
ಈ ದರ ಇಂದಿನಿಂದ ಜಾರಿಗೆ ಬರಲಿದೆ ಎಂಬುದಾಗಿ ಹೇಳಿದೆ.

Ad Widget . Ad Widget .

ಈ ಕುರಿತಂತೆ ಮಾಹಿತಿ ನೀಡಿರುವಂತ ಕೆಎಂಎಫ್, ಜಂಬೋ ಪ್ಯಾಕೇಟ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ಫೆಬ್ರವರಿ 11 ರ ಇಂದಿನಿಂದ 231ರಿಂದ 234 ರೂಗೆ ಏರಿಕೆಯಾಗಲಿವೆ ಎಂದು ಹೇಳಿದೆ.

Ad Widget . Ad Widget .

ಅಂದ ಹಾಗೇ ನಂದಿನಿ ಜಂಬೂ ಪ್ಯಾಕೇಟ್ ಹಾಲು 6 ಲೀಟರ್ ಸಾಮರ್ಥ್ಯದ್ದಾಗಿದೆ. ಈ ದರವನ್ನು ಇಂದಿನಿಂದ ಜಾರಿಗೆ ಬರುವಂತೆ 3 ರೂ ಹೆಚ್ಚಿಸಿದ ಪರಿಣಾಮ 234 ರೂ ಆಗಲಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.

Leave a Comment

Your email address will not be published. Required fields are marked *