ಕರಾವಳಿಗೆ ಬರುತ್ತಿರುವ ಅಮಿತ್ ಶಾ ಗೆ ರವಾನೆಯಾಯ್ತು ಮಂಜುನಾಥನ ಪ್ರಸಾದ| ಈಶ್ವರಪ್ಪ ಕೈಯಲ್ಲಿ ಪ್ರಸಾದ ಕಳುಹಿದ ಧರ್ಮಸ್ಥಳ ಧರ್ಮಾಧಿಕಾರಿ

ಸಮಗ್ರ ನ್ಯೂಸ್: ಕರಾವಳಿಗೆ ಬರುತ್ತಿರುವ ಗೃಹ ಸಚಿವ ಅಮಿತ್​​ ಶಾಗೆ ಧರ್ಮಸ್ಥಳ ಪ್ರಸಾದ ನೀಡಲಾಗುತ್ತಿದ್ದು, ಮುಖಂಡರು ಮಂಗಳೂರು ಸಭೆ ವೇಳೆ ಪ್ರಸಾದ ನೀಡಲಿದ್ದಾರೆ. ಅಮಿತ್ ಶಾಗಾಗಿ ಧರ್ಮಸ್ಥಳದಿಂದ ವಿಶೇಷ ಪ್ರಸಾದ ನೀಡಲಾಗುತ್ತಿದೆ.

Ad Widget ... ..

ಬೆಳ್ಳಿ ಬಟ್ಟಲಿನಲ್ಲಿ ಶ್ರೀ ಮಂಜುನಾಥಸ್ವಾಮಿ ಪ್ರಸಾದ ಹಾಗೂ ಒಂದು ಚಿನ್ನಲೇಪಿತ ಶ್ರೀಮಂಜುನಾಥ ಸ್ವಾಮಿಯ ನಾಣ್ಯವನ್ನು ನೀಡಲಾಗುತ್ತಿದೆ. ಸಚಿವ ಈಶ್ವರಪ್ಪ ಅಮಿತ್​ ಶಾಗೆ ಪ್ರಸಾದ ತಲುಪಿಸಲಿದ್ದಾರೆ.

Ad Widget

ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರು ಮಾಜಿ ಸಚಿವ ಈಶ್ವರಪ್ಪಗೆ ಪ್ರಸಾದ ಕೊಟ್ಟಿದ್ದಾರೆ. ಸಚಿವ ಅಮಿತ್​ ಶಾ ಪುತ್ತೂರಿಗೆ ಭೇಟಿ ನೀಡಲಿದ್ದು, ಪುತ್ತೂರು, ಮಂಗಳೂರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.

Leave a Comment

Your email address will not be published. Required fields are marked *