Ad Widget .

ಭೂಕಂಪದ ಭೂಮಿಯಲ್ಲೊಂದು ಕರುಳು ಹಿಂಡುವ ಕಥೆ| ಸತ್ತ ಮಗಳ ಕೈ ಹಿಡಿದು 5 ದಿನದಿಂದ ಕುಳಿತ ತಂದೆ

ಸಮಗ್ರ ನ್ಯೂಸ್: ಟರ್ಕಿಯಲ್ಲಿ ಭೂಕಂಪನ ಸಂಭವಿಸಿ 5 ದಿನಗಳು ಕಳೆಯುತ್ತಾ ಬಂದರೂ ಆವಶೇಷಗಳಡಿ ಮೃತಪಟ್ಟು ಕೈ ಮಾತ್ರ ಕಾಣುತ್ತಿರುವ ಮಗಳ ಕೈ ಹಿಡಿದು ತಂದೆಯ ದೃಶ್ಯ ನೋಡುತ್ತಿದ್ದರೆ ಎಂತಹವರ ಮನ ಕರಗದೇ ಇರದು. ಕಳೆದ ಸೋಮವಾರ ಸಂಭವಿಸಿದ ಭೀಕರ ಭೂಕಂಪನದಲ್ಲಿ 21 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Ad Widget . Ad Widget .

ದುರಂತ ಸಂಭವಿಸಿ 5 ದಿನ ಕಳೆದರೂ ತಂದೆ ಕಾಣುತ್ತಿರುವ ತನ್ನ 15 ವರ್ಷದ ಮಗಳ ಕೈಯನ್ನು ಬಿಡಲು ನಿರಾಕರಿಸಿ ಕದಲದೇ ಕೂತಿದ್ದಾರೆ.

Ad Widget . Ad Widget .

ಭೂಕಂಪನದಿಂದ ಉರುಳಿದ ಕಾಂಕ್ರಿಟ್ ಕಂಬದ ಅಡಿಯಲ್ಲಿ ಸಿಲುಕಿ 15 ವರ್ಷದ ಮಗಳು ಮೃತಪಟ್ಟಿದ್ದಾಳೆ. ಆಕೆ ಬದುಕಿಲ್ಲ ಎಂಬುದು ತಿಳಿದಿದ್ದರೂ ಆಕೆಯನ್ನು ಬಿಟ್ಟು ಕದಲಲು ಅಪ್ಪನ ಮನ ಒಪ್ಪುತ್ತಿಲ್ಲ.

ಮಗಳು ಇರ್ಮಾಕ್ ಮೃತಪಟ್ಟಿದ್ದಾಳೆ ಎಂದರೂ ಒಪ್ಪಿಕೊಳ್ಳಲು ತಯಾರಿಲ್ಲದ ತಂದೆ ಮೆಸ್ಕೂತ್ ಹ್ಯಾನ್ಸರ್, ಆಕೆ ಕೈ ಹಿಡಿದುಕೊಂಡೇ ಯಾವಾಗಲೂ ಮಲಗುತ್ತಿದ್ದಳು. ಈಗಲೂ ಮಲಗಿದ್ದಾಳೆ ಎಂದು ಹಪಿಹಪಿಸುತ್ತಿದ್ದಾರೆ.

ಸೋಮವಾರ ಸಂಭವಿಸಿದ ಮೊದಲ ಭೂಕಂಪನದಲ್ಲಿ ಹಲವಾರು ಜೀವ-ಜೀವನಗಳು ಮಣ್ಣುಪಾಲಾಗಿವೆ. ಆದರೆ ಪ್ರೀತಿ ಪಾತ್ರರು ಬದುಕಿದ್ದಾರೆ ಎಂಬ ನಂಬಿಕೆಯಿಂದ ಹುಡುಕಾಟಗಳು ನಡೆದಿವೆ. ಇದರಲ್ಲಿ ಕೆಲವು ಜೀವಂತವಾಗಿ ಆವಶೇಷಗಳಡಿ ಸಿಲುಕಿದ್ದಾರೆ. ಇನ್ನು ಕೆಲವರಿಗೆ ಆಘಾತ, ನಿರಾಸೆ ಉಂಟಾಗುತ್ತಿದೆ.

ಮಗಳ ಕೈ ಬಿಟ್ಟು ಕದಲದೇ ಕೂತ ತಂದೆಯನ್ನು ಮಾತನಾಡಿಸಲು ಫೋಟೊಗ್ರಾಫರ್ ಹಿಂಜರಿದಿದ್ದಾನೆ. ಅಲ್ಲದೇ ಆ ಭಾವುಕ ತಂದೆಯ ಬಳಿ ಹೋಗದೇ ಸುಮಾರು 20 ಮೀ. ದೂರದಿಂದ ಫೋಟೊ ತೆಗೆಯುವಾಗ ಆತನ ಕಣ್ಣಂಚಿನಲ್ಲೂ ನೀರು ಜಿನುಗುತ್ತಿತ್ತು.

Leave a Comment

Your email address will not be published. Required fields are marked *