Ad Widget .

ಸರ್ಕಾರದಿಂದ ಮನೆಕಟ್ಟಲು ಬಂದ ಹಣದೊಂದಿಗೆ ಲವ್ವರ್ಸ್ ಜೊತೆ ಎಸ್ಕೇಪ್ ಆದ ಮಹಿಳೆಯರು| ಹಣ, ಹೆಂಡತಿ ಇಲ್ಲದೆ ಗಂಡಂದಿರಿಗೆ ಗಲಿಬಿಲಿ| ಹೀಗೊಂದು ವಿಚಿತ್ರ ಸ್ಟೋರಿ

ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ (ಪಿಎಂಎವೈ) ತಮ್ಮ ಅಕೌಂಟ್​ಗೆ ಬರುವ ಹಣವನ್ನು ತೆಗೆದುಕೊಂಡು ನಾಲ್ವರು ಮಹಿಳೆಯರು ತಮ್ಮ ಗಂಡಂದಿರನ್ನ ಬಿಟ್ಟು ಲವರ್​ ಜೊತೆ ಎಸ್ಕೇಪ್​ ಆಗಿದ್ದಾರೆ. ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ 4 ಪಂಚಾಯತಿ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆಗಳು ನಡೆದಿವೆ.

Ad Widget . Ad Widget .

ಆರ್ಥಿಕವಾಗಿ ಹಿಂದುಳಿದ ಬಡವರು ಮನೆ ನಿರ್ಮಿಸಿಕೊಳ್ಳಲೆಂದು ಕೇಂದ್ರ ಸರ್ಕಾರವು ಪಿಎಂಎವೈ ಯೋಜನೆಯಡಿ ಮಹಿಳೆಯರ ಹೆಸರಲ್ಲೇ ಮನೆ ನಿರ್ಮಿಸುತ್ತದೆ. ಅದರಂತೆ ಹಣವನ್ನು ಕೂಡ ಮಹಿಳೆಯರ ಹೆಸರಿನ ಖಾತೆಗೆ ಸಂದಾಯ ಮಾಡುತ್ತದೆ. ಈ ರೀತಿ ಸಂದಾಯ ಮಾಡಿದ ತಲಾ 50 ಸಾವಿರ ರೂ.ಗಳನ್ನ ತೆಗೆದುಕೊಂಡು ವಿವಾಹಿತ ನಾಲ್ವರು ಮಹಿಳೆಯರು ಗಂಡಂದಿರನ್ನ ಬಿಟ್ಟು ಲವರ್​ಗಳ ಜೊತೆ ಓಡಿ ಹೋಗಿದ್ದಾರೆ.

Ad Widget . Ad Widget .

ಇದರಿಂದ ಗಲಿಬಿಲಿಗೊಂಡ ಗಂಡಂದಿರಿಗೆ ದಿಕ್ಕು ತೋಚದಂತಾಗಿದೆ. ಇದರ ನಡುವೆಯೇ ಮನೆ ನಿರ್ಮಾಣ ಕಾರ್ಯ ಇನ್ನು ಏಕೆ ಪ್ರಾರಂಭಿಸಿಲ್ಲ. ಬೇಗ ಮನೆ ನಿರ್ಮಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಗಂಡಂದಿರಿಗೆ ನೋಟಿಸ್​ ನೀಡಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಗಂಡಂದಿರು ಕಚೇರಿಗೆ ಹೋಗಿ ನಮ್ಮ ಪತ್ನಿಯರು ಓಡಿ ಹೋಗಿದ್ದಾರೆ. ಇನ್ನು ಮುಂದಿನ ಕಂತಿನ ಹಣವನ್ನು ಅವರ ಬ್ಯಾಂಕ್​ ಖಾತೆಗೆ ಹಾಕದಂತೆ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *