Ad Widget .

ಆತ ನನ್ನ ಬೆತ್ತಲೆ ಫೋಟೋಗಳನ್ನು‌ ತೆಗೆದು ಹಣಕ್ಕಾಗಿ ಮಾರುತ್ತಿದ್ದ| ಆದಿಲ್ ವಿರುದ್ದ ಹೊಸ ಆರೋಪ ಹೊರಿಸಿದ ರಾಖಿ ಸಾವಂತ್

ಸಮಗ್ರ ನ್ಯೂಸ್: ‘ಆದಿಲ್ ಖಾನ್‌ ನನ್ನ ನಗ್ನ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಸೈಬರ್ ಕ್ರೈಮ್ ಡಿಪಾರ್ಟ್‌ಮೆಂಟ್‌ ಈ ಕೇಸ್‌ನ ನಡೆಸುತ್ತಿದೆ. ಆದಿಲ್ ನನಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿರುವ ಕಾರಣ ಆತನಿಗೆ ಬೇಲ್ ಸಿಗಬಾರದು. ಹೀಗಾಗಿ ವೈಯಕ್ತಿಕವಾಗಿ ಪ್ರತಿಯೊಂದು ವಿಚಾರಣೆಯಲೂ ಭಾಗಿಯಾಗುತ್ತಿರುವೆ. ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡು ಸಂಪೂರ್ಣ ರಿಪೋರ್ಟ್‌ ಸಲ್ಲಿಸಿರುವೆ. ಆದಿಲ್ ನನಗೆ ತುಂಬಾ ಟಾರ್ಚರ್‌ ಕೊಟ್ಟಿದ್ದಾನೆ ಅಲ್ಲದೆ ನನ್ನ ಮೊಬೈಲ್‌ನಿಂದ ಓಟಿಪಿ ಪಡೆದುಕೊಂಡು ಹಣ ಹೊಡೆದಿದ್ದಾನೆ’ ಎಂದು ರಾಖಿ ಸಾವಂತ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

Ad Widget . Ad Widget .

ಮನೆಯಲ್ಲಿ ಬೆಳಗ್ಗೆ ಸುಮ್ಮನಿ ಕುಳಿತಿರುವಾಗ ಆದಿಲ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ನಾನು ಪೊಲೀಸ್‌ಗೆ ಕರೆ ಮಾಡಿರುವೆ. ಆಗಾಗ ಮನೆಗೆ ಭೇಟಿ ನೀಡಿ ಜೀವ ಬೆದರಿಕೆ ಹಾಕುತ್ತಿದ್ದ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ತಪ್ಪಾಗಿ ಹೇಳಿದ್ದರೆ ನಿಮ್ಮ ಕುಟುಂಬ ನಾಶ ಮಾಡುವುದಾಗಿ ಹೆದರಿಸುತ್ತಿದ್ದಾನೆ’ ಎಂದು ರಾಖಿ ಹೇಳಿದ್ದಾರೆ.

Ad Widget . Ad Widget .

ಇದಾದ ಕೆಲವೇ ನಿಮಿಷಗಳಲ್ಲಿ ಆದಿಲ್ 1.50 ಕೋಟಿ ರೂಪಾಯಿ ಸಾಲ ಪಡೆದುಕೊಂಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸ್ವತಃ ಆದಿಲ್ ಹಣ ಪಡೆದುಕೊಂಡಿರುವ ಎಂದು ಒಪ್ಪಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಹೊಸ ಕಾರಿಗೆಂದು ಹಣ ತೆಗೆದುಕೊಂಡಿರುವ ನಾಲ್ಕು ತಿಂಗಳುಗಳಲ್ಲಿ ರಾಖಿಗೆ ಕೊಡುವೆ ಎನ್ನುತ್ತಾರೆ.

‘ನಾನು ಸಲ್ಲಿಸಿರುವ ಎಲ್ಲ ಕೇಸ್‌ಗಳು ಕೋರ್ಟ್‌ನಲ್ಲಿ ಇವೆ. ಸರಿ ಮಾಡಿಕೊಳ್ಳೋಣ ಅಂತ ನಾನು ಅದಿಲ್‌ಗೆ 100 ಅವಕಾಶ ಕೊಟ್ಟೆ. ಆದಿಲ್‌ ಮದುವೆಯಾಗಿದ್ದೇನೆ ಅಂತ ನನಗೆ ಬ್ರೇಕಿಂಗ್ ನ್ಯೂಸ್‌ ಸಿಕ್ಕಿದೆ. ಆದಿಲ್‌ನ ಮದುವೆ, ವಿಚ್ಛೇದನದ ಪತ್ರ ನನಗೆ ಸಿಕ್ಕಿದೆ. ಯಾಕೆ ಇದೆಲ್ಲ ನನಗೆ ಆಗುತ್ತೆ ಅಂತ ದೇವರೇ ಹೇಳಬೇಕು. ನಾನು ಎಲ್ಲರ ಮುಂದೆ ಬಂದು ಎಲ್ಲವನ್ನು ಹೇಳ್ತೀನಿ. ನಾನು ಎಲ್ಲರ ಮುಂದೆ ಬಂದು ಎಲ್ಲವನ್ನು ಹೇಳ್ತೀನಿ. ಆದರೆ ಕೆಲವರು ಹೇಳೋದಿಲ್ಲ. ಎಲ್ಲ ಮಹಿಳೆಯರು ಹೇಳಲು ಧೈರ್ಯ ಮಾಡಲ್ಲ, ನಾನು ಮಾಡ್ತೀನಿ ಅಷ್ಟೇ’ ಎಂದಿದ್ದಾರೆ ರಾಖಿ.

ಕೋರ್ಟ್‌ ವಿಚಾರಣೆಗೆಂದು ಪೊಲೀಸರು ಆದಿಲ್‌ನ ಕರೆದುಕೊಂಡು ಹೋಗುವಾಗ ರಾಖಿ ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ಜೊತೆಗೆ ಆದಿಲ್ ಮಾಡಿರುವ ಮೋಸದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. ರಾಖಿ ಆರೋಪಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಆದಿಲ್ ಬೇಲ್‌ ಮೇಲೆ ಹೊರ ಬಂದ ನಂತರ ತಿಳಿಯುತ್ತದೆ. ಬಾಲಿವುಡ್ ಸಿನಿಮಾ ಸುದ್ದಿಗಳಿಗಿಂತ ರಾಖಿ ಸಾವಂತ್ ಸುದ್ದಿಯೇ ಸದ್ಯ ಸಖತ್ ಟ್ರೆಂಡ್ ಆಗಿದೆ.

Leave a Comment

Your email address will not be published. Required fields are marked *