Ad Widget .

ಮೂಡಿಗೆರೆ: ಪರಿಹಾರಕ್ಕಾಗಿ ಕಾದು ಸುಸ್ತಾದ ನಿರಾಶ್ರಿತರಿಂದ ತಾ.ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ!

ಸಮಗ್ರ ನ್ಯೂಸ್: ಪರಿಹಾರಕ್ಕಾಗಿ ನಾಲ್ಕು ವರ್ಷದಿಂದ ಕಾದು ಕಾದು ಸುಸ್ತಾದ ನಿರಾಶ್ರಿತರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದಿದೆ.

Ad Widget . Ad Widget .

2019ರ ಆಗಸ್ಟ್ 9ರಂದು ಧಾರಾಕಾರ ಮಳೆಯಾಗಿದ್ದು, ಮಲೆಮನೆ-ಮಧುಗುಂಡಿ ಗ್ರಾಮಗಳು ಅಸ್ತವ್ಯಸ್ತಗೊಂಡಿದ್ದವು. ಈ ಗ್ರಾಮದಲ್ಲಿ ಮನೆಗಳು ಇರುವ ಕುರುಹುಗಳು ಇರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಗುಡ್ಡದ ಮಣ್ಣು ಕುಸಿದು ಬಿದ್ದು ಊರಿಗೆ ಊರೇ ನೆಲಸಮವಾಗಿತ್ತು. ಈ ವೇಳೆ ಜನರು ರಾತ್ರೋರಾತ್ರಿ ಮನೆಯಿಂದ ಓಡಿಬಂದು ಜೀವ ಉಳಿಸಿಕೊಂಡಿದ್ದರು.

Ad Widget . Ad Widget .

ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಸಚಿವ ಆರ್.ಅಶೋಕ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಮಾಧುಸ್ವಾಮಿ ಸೇರಿದಂತೆ ಹಲವಾರು ನಾಯಕರು ಘಟನಾ ಸ್ಥಳಕ್ಕೆ ಆಗಮಿಸಿ ಹೊಸ ಬದುಕಿನ ಭರವಸೆ ನೀಡಿದ್ದರು.

ಇಲ್ಲಿನ ಜನ ಹೋರಾಟ, ಮನವಿ ಏನೇ ಮಾಡಿದರು. ಸರ್ಕಾರದಿಂದ ಅಲ್ಪ ಪ್ರಮಾಣದ ಪರಿಹಾರ ಸಿಕ್ಕಿದೆ. ನಾಲ್ಕು ವರ್ಷದಿಂದ ಕಾದು-ಕಾದು ಸುಸ್ತಾದ ಜನರು ಶುಕ್ರವಾರ ತಾಲೂಕು ಕಚೇರಿಯಲ್ಲಿ ವಿಷ ಸೇವಿಸಿ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಇಲ್ಲವಾದರೆ, ಮೂಡಿಗೆರೆ ತಾಲೂಕು ಕಚೇರಿ ಹಾಗೂ ಸರ್ಕಾರ ಮತ್ತೊಂದು ಅನಾಹುತ ಸಂಭವಿಸುತ್ತಿತ್ತು.

Leave a Comment

Your email address will not be published. Required fields are marked *