Ad Widget .

ಬಿಬಿಸಿ ಗೆ ಬಿಗ್ ರಿಲೀಪ್| ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಕುರಿತ ಅರ್ಜಿ ವಜಾ

ಸಮಗ್ರ ನ್ಯೂಸ್: ‘ಇಂಡಿಯಾ: ದ ಮೋದಿ ಕ್ವೆಶ್ಚೆನ್‌’, ಸಾಕ್ಷ್ಯ ಚಿತ್ರ ಪ್ರದರ್ಶಿಸಿದ್ದ ಕಾರಣಕ್ಕೆ ಬಿಬಿಸಿ ವಾಹಿನಿಯನ್ನು ಭಾರತದಲ್ಲಿ ನಿಷೇಧಿಸಲು ಕೋರಿದ್ದ ಹಿಂದೂ ಸೇನಾ ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌. ತಾನು ಸೆನ್ಸಾರ್‌ ಶಿಪ್‌ ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.

Ad Widget . Ad Widget .

ಇದು ಪೂರ್ಣ ತಪ್ಪು ತಿಳಿವಳಿಕೆಯದಾಗಿದೆ. ಸರ್ವೋಚ್ಚ ನ್ಯಾಯಾಲಯವು ಹೇಗೆ ತಾನೆ ಬಿಬಿಸಿ ನಿಷೇಧವನ್ನು ಒಪ್ಪಿಕೊಳ್ಳುವುದು ಸಾಧ್ಯ ಎಂದು ಜಡ್ಜ್ ಕೇಳಿದರು.

Ad Widget . Ad Widget .

2002ರ ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿರುವ ಬಿಬಿಸಿಯನ್ನು ಭಾರತದಲ್ಲಿ ನಿಷೇಧಿಸುವುದೆಂಬುದು ತೀರಾ ತಪ್ಪು ತಿಳಿವಳಿಕೆಯದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ಒಂದು ಸಾಕ್ಷ್ಯಚಿತ್ರವು ದೇಶದ ಮೇಲೆ ಹೇಗೆ ದುಷ್ಪರಿಣಾಮ ಬೀರಲು ಸಾಧ್ಯ?” ಎಂದು ಪ್ರಶ್ನಿಸಿದ ನ್ಯಾಯಾಧೀಶರು, ಭಾರತದಲ್ಲಿ ಬ್ರಿಟನ್ನಿನ ರಾಷ್ಟ್ರೀಯ ಪ್ರಸಾರ ಸಂಸ್ಥೆಯನ್ನು ನಿಷೇಧಿಸಬೇಕು ಎಂಬ ಹಿಂದೂ ಸೇನಾದ ಮುಖ್ಯಸ್ಥ ವಿಷ್ಣು ಗುಪ್ತ ಎನ್ನುವವರ ರಿಟ್ ವಜಾ ಮಾಡಿದರು.

ಅರ್ಜಿದಾರರ ಪರ ಹಾಜರಾದ ವಕೀಲ ಪಿಂಕಿ ಆನಂದ್ ಅವರು, ಬಿಬಿಸಿಯು ಬೇಕೆಂದೇ ಭಾರತದ ಘನತೆಗೆ ಮಸಿ ಬಳಿಯುತ್ತಿದೆ ಎಂದು ವಾದಿಸಿದರು. ಅಲ್ಲದೆ ಆ ಸಾಕ್ಷ್ಯಚಿತ್ರದ ಹಿಂದಿನ ಸಂಚಿನ ಬಗ್ಗೆ ಎನ್ ಐಎ- ರಾಷ್ಟ್ರೀಯ ತನಿಖೆಗಳಿಂದ ತನಿಖೆ ನಡೆಸುವಂತೆಯೂ ಕೋರಿದರು. ಆದರೆ ಸುಪ್ರೀಂ ಕೋರ್ಟು ಅದಕ್ಕೆ ಅನುಮತಿಸಲಿಲ್ಲ.

Leave a Comment

Your email address will not be published. Required fields are marked *