Ad Widget .

ಸುಳ್ಯ: ಸಾಹಿತಿ , ಜ್ಯೋತಿಷಿ ಭೀಮರಾವ್ ವಾಷ್ಠರ್ ರಿಗೆ ಸನ್ಮಾನಗಳ ಸರಮಾಲೆ

ಸಮಗ್ರ ನ್ಯೂಸ್: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ ಆಯೋಜಿಸಿದ್ದ ಸಾಹಿತ್ಯ ಜಾನಪದ ಸಂಗೀತ ಕಲೋತ್ಸವ ಸಮಾರಂಭದಲ್ಲಿ ಸುಳ್ಯದ ಸಾಹಿತಿ ಮತ್ತು ಖ್ಯಾತ ಜ್ಯೋತಿಷಿ ಹಾಗೂ ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ಅವರನ್ನು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಶ್ರೀ ರವೀಂದ್ರ ಶೆಟ್ಟಿ ರವರು ವಾಷ್ಠರ್ ರವರ ಅಪಾರ ಸಾಧನೆ ಪರಿಗಣಿಸಿ ಸನ್ಮಾನಿಸಿ ಗೌರವಿಸಿದರು.

Ad Widget . Ad Widget .

ಐವರ್ನಾಡಿನಲ್ಲಿ ನಡೆದ ಅಯ್ಯಪ್ಪ ಸ್ವಾಮೀ ಹರಕೆ ಪೂಜಾ ಕಾರ್ಯಕ್ರಮದಲ್ಲಿ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಮತ್ತು ಸಿನ್ನಮ್ಮ ಅವರು ವಾಷ್ಠರ್ ಅವರನ್ನು ಸನ್ಮಾನಿಸಿದರು .ಈ ಸಂದರ್ಭದಲ್ಲಿ ಡಾ.ಸಾಯಿಗೀತಾ ರವರು ಉಪಸ್ಥಿತರಿದ್ದರು .ಪುತ್ತೂರಿನಲ್ಲಿ ನಡೆದ ಸಾಹಿತ್ಯ ಗೋಷ್ಠಿ ಮತ್ತು ಸಾಹಿತ್ಯ ಕೃತಿಗಳ ಬಿಡುಗಡೆ ಸಂದರ್ಭದಲ್ಲಿ ಭೀಮರಾವ್ ವಾಷ್ಠರ್ ಅವರನ್ನು ಹಿರಿಯ ಸಾಹಿತಿ ಹರಿನರಸಿಂಹ ಉಪಾಧ್ಯಾಯ ರವರು ಸನ್ಮಾನಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ಮಹಿಳಾ ಕವಿಗಳಾದ ಆಶಾ ಮಯ್ಯ , ಸುಮಾ ಕಿರಣ್ ಇನ್ನಿತರರು ಉಪಸ್ಥಿತರಿದ್ದರು .

Leave a Comment

Your email address will not be published. Required fields are marked *