ಜಿಎಸ್ಟಿ ವಂಚನೆ ಆರೋಪ| ಅದಾನಿ ಗ್ರೂಪ್ಸ್ ಮೇಲೆ‌ ಅಧಿಕಾರಿಗಳಿಂದ ದಾಳಿ

ಸಮಗ್ರ ನ್ಯೂಸ್: ಜಿಎಸ್‌ಟಿ ಜಮಾ ಮಾಡಿಲ್ಲ ಎಂಬ ಆರೋಪದಡಿ ಗೌತಮ್​ ಅದಾನಿ ಒಡೆತನದ ಅದಾನಿ ಕಂಪನಿ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ತೆರಿಗೆ ಇಲಾಖೆಯು ಪರ್ವಾನೂರಿನಲ್ಲಿರುವ ಅದಾನಿ ಕಂಪನಿ ಮೇಲೆ ದಾಳಿ ಮಾಡಿದೆ.

Ad Widget ... ..

ಬುಧವಾರದಂದು ರಾತ್ರಿ ವೇಳೆ ಹಿಮಾಚಲ ಪ್ರದೇಶದಲ್ಲಿರುವ ಅದಾನಿ ವಿಲ್ಮಾರ್ ಗ್ರೂಪ್​ನ ಸಿ ಆಯಂಡ್​ ಎಫ್​ ಸ್ಟೋರ್​ಗಳ ಮೇಲೆ ​ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕಳೆದ 5 ವರ್ಷದಿಂದ ಸರಕು ಮತ್ತು ಸೇವಾ ತೆರಿಗೆಯನ್ನು ಜಮಾ ಮಾಡಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

Ad Widget

ಅಬಕಾರಿ ಇಲಾಖೆ ಮತ್ತು ತೆರಿಗೆ ಇಲಾಖೆ ತಂಡವು ದಾಳಿ ಮಾಡುವ ಮೂಲಕ ಮೊದಲಿಗೆ ಗೋದಾಮಿನಲ್ಲಿರುವ ದಾಸ್ತಾನು ಮತ್ತು ದಾಖಲೆಯನ್ನು ಪರಿಶೀಲಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿರುವ ಅದಾನಿ ಒಡೆತನದ ಏಳು ಕಂಪನಿಗಳಿವೆ. ಅವುಗಳಲ್ಲಿ ಹಣ್ಣುಗಳ ಕೋಲ್ಡ್​​ ಸ್ಟೋರ್​​ಗಳಿಂದ ಹಿಡಿದು, ದಿನಸಿ ಅಂಗಡಿಯವರೆಗಿನ ಸಾಮಾಗ್ರಿಗಳಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿ ಅದಾನಿ ಕಂಪನಿ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದೆ.

Leave a Comment

Your email address will not be published. Required fields are marked *