Ad Widget .

2004-2014 ಹಗರಣಗಳ‌ ದಶಕ| ಕಾಂಗ್ರೆಸ್ ವಿರುದ್ದ ಸಂಸತ್ತಿನಲ್ಲಿ ಪ್ರಧಾನಿ ವಾಗ್ದಾಳಿ

ಸಮಗ್ರ ನ್ಯೂಸ್: ಬಜೆಟ್​ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಪಾಲ್ಗೊಂಡು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಟೀಕಾಪ್ರಹಾರ ಎಸಗಿದರು.

Ad Widget . Ad Widget .

ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯುಪಿಎ ಸರ್ಕಾರದ ಅವಧಿಯ ಆಡಳಿತವನ್ನು ಪ್ರಸ್ತಾಪಿಸಿ, “ಆ 10 ವರ್ಷಗಳಲ್ಲಿ ದೇಶದಲ್ಲಿ ಕೇವಲ ಹತ್ಯೆಗಳು, ಭಯೋತ್ಪಾದನೆ ಹಾಗು ಹಗರಣಗಳೇ ತುಂಬಿದ್ದವು. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ ದುರ್ಬಲವಾಗಿತ್ತು. 2014ರ ಮೊದಲು ದೇಶದ ಆರ್ಥಿಕತೆ ಹದಗೆಟ್ಟಿತ್ತು. 2004ರಿಂದ 2014ರವರೆಗೆ ಹತ್ತು ವರ್ಷಗಳ ಹಗರಣಗಳು ಮತ್ತು ಆರ್ಥಿಕ ದುರುಪಯೋಗದ ಕಾಲವೇ ಆಗಿ ಹೋಗಿತ್ತು” ಎಂದರು.

Ad Widget . Ad Widget .

“ರಾಷ್ಟ್ರಪತಿಗಳ ದೂರದೃಷ್ಟಿಯ ಭಾಷಣ ದೇಶದ ಅದೆಷ್ಟೋ ಜನರಿಗೆ ಒಳ್ಳೆಯ ಮಾರ್ಗ ತೋರಿಸಿದೆ. ಸಂಸತ್ತಿನಲ್ಲಿ ಅವರ ಉಪಸ್ಥಿತಿ ಐತಿಹಾಸಿಕ ಮತ್ತು ದೇಶದ ಮಹಿಳೆಯರು, ಯುವತಿಯರಿಗೆ ಸ್ಫೂರ್ತಿ. ಅವರು ಭಾಷಣ ಮಾಡುತ್ತಿದ್ದಾಗ ‘ಒಬ್ಬ ದೊಡ್ಡ ನಾಯಕ’ ಅವರನ್ನು ಅವಮಾನಿಸಿದರು. ಆ ಸಂದರ್ಭದಲ್ಲಿ ಸಮಾಜದ ಹಿಂದುಳಿದ ವರ್ಗದ ಬಗ್ಗೆ ಆ ನಾಯಕನ ಉದ್ದೇಶ ಸ್ಪಷ್ಟವಾಗಿ ಗೋಚರಿಸಿತು. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಯಾರೂ ಮಾತನಾಡಲಿಲ್ಲ” ಎಂದು ಪ್ರಧಾನಿ ವಿಪಕ್ಷಗಳನ್ನು ಟೀಕಿಸಿದರು.

“ನಮಗೆ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿದೆ. ಆದರೆ, ಇದು ಕೆಲವರಿಗೆ ನೋವುಂಟು ಮಾಡಿದೆ ಎಂದು ಈಗ ನನಗನಿಸುತ್ತಿದೆ. ಪ್ರತಿ ವಿಶ್ವಾಸಾರ್ಹ ಕಂಪನಿ ಕೂಡ ಭಾರತದ ಬಗ್ಗೆ ಹೊಸ ನಂಬಿಕೆ ಮತ್ತು ಭರವಸೆ ಹೊಂದಿದೆ. ಇತರ ದೇಶಗಳು ನಮ್ಮನ್ನು ಭರವಸೆಯಿಂದ ನೋಡಲು ಭಾರತದ ಸ್ಥಿರತೆ, ಶಕ್ತಿ ಮತ್ತು ಬೆಳವಣಿಗೆಯೇ ಕಾರಣ ಎಂದು ಪ್ರಧಾನಿ ತಿಳಿಸಿದರು.

“ಈ ಹಿಂದೆ ಮಧ್ಯಮ ವರ್ಗವನ್ನು ಕಡೆಗಣಿಸಲಾಗಿತ್ತು. ಆದರೆ, ಮಧ್ಯಮ ವರ್ಗದ ಪ್ರಾಮಾಣಿಕತೆಯನ್ನು ನಮ್ಮ ಎನ್‌ಡಿಎ ಸರ್ಕಾರ ಗುರುತಿಸಿದೆ. ಅವರೇ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಆಗ ಗಣಿಗಾರಿಕೆಯಿಂದ ರಕ್ಷಣಾ ವಲಯವರೆಗೂ ಮಹಿಳೆಯರು ತಮ್ಮ ಹಕ್ಕು ಸಾಧಿಸುತ್ತಿದ್ದಾರೆ. 9 ಕೋಟಿ ಜನರು ಗ್ಯಾಸ್ ಸಂಪರ್ಕ ಪಡೆದಿದ್ದಾರೆ. 11 ಕೋಟಿ ಮಹಿಳೆಯರಿಗೆ ಉಚಿತ ಮನೆ ದೊರೆತಿದೆ. 8 ಕೋಟಿ ಜನ ತಮ್ಮ ಮನೆಯಲ್ಲೇ ನಳದ ನೀರು ಪಡೆಯುತ್ತಿದ್ದಾರೆ. ಪ್ರತಿಪಕ್ಷಗಳ ಸುಳ್ಳುಗಳನ್ನು ಈ ಜನತೆ ಹೇಗೆ ಒಪ್ಪಿಕೊಳ್ಳುತ್ತಾರೆ?” ಎಂದು ಕಿಡಿಕಾರಿದರು.

Leave a Comment

Your email address will not be published. Required fields are marked *