Ad Widget .

ಪಕ್ಷಗಳ ಗಿಫ್ಟ್ ತಿರಸ್ಕರಿಸಿ 5ಸಾವಿರ ಬಹುಮಾನ ಗೆಲ್ಲಿ| ಕೆಆರ್ ಎಸ್ ನಿಂದ ಹೊಸತೊಂದು ಘೋಷಣೆ

ಸಮಗ್ರ ನ್ಯೂಸ್: ರಾಜ್ಯ ಚುನಾವಣೆಗೂ ಮುನ್ನವೇ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಜನಪ್ರತಿನಿಧಿಗಳು ನೀಡುವ ಉಡುಗೊರೆ ತಿರಸ್ಕರಿಸಿದರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಘೋಷಣೆ ಮಾಡಿದ್ದಾರೆ.

Ad Widget . Ad Widget .

ಈ ಕುರಿತು ಮಾಹಿತಿ ನೀಡಿರುವ ಅವರು, ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂಬ ಉದ್ದೇಶದಿಂದ 5 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಜನರೇ ಜನಪ್ರತಿನಿಧಿಗಳ ಆಮಿಷಗಳನ್ನು ತಿರಸ್ಕರಿಸುವ ಮತ್ತು ಚುನಾವಣಾ ಅಕ್ರಮಗಳನ್ನು ನಿಲ್ಲಿಸುವ ಕಾರ್ಯಕ್ಕೆ ಮುಂದಾಗಬೇಕು. ಗಿಫ್ಟ್ ಗಳನ್ನು ತಿರಸ್ಕರಿಸುವ ಘಟನೆಯ ವಿಡಿಯೋ ಮಾಡಿ 8861775862 ಸಂಖ್ಯೆಗೆ ಕಳುಹಿಸುವವರಿಗೆ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

Ad Widget . Ad Widget .

ಜನಪ್ರತಿನಿಧಿಗಳು ಕುಕ್ಕರ್, ಮಿಕ್ಸಿ, ತಟ್ಟ, ಚೆಂಬು, ಕಿಟ್ಟು ಹಂಚಿ ನಿಮ್ಮನ್ನು ಅನೈತಿಕ ಕೆಲಸಕ್ಕೆ ಪ್ರಚೋದಿಸುವ ನೀಚ, ಭ್ರಷ್ಟ ರಾಜಕಾರಣಿಗಳನ್ನು ಪ್ರಶ್ನಿಸಿ, ತಿರಸ್ಕರಿಸಿ ಅದನ್ನು ವಿಡಿಯೋ ಮಾಡಿ ಕಳುಹಿಸುವ ಧೀರ ಭಕ್ತರಿಗೆ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *