ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಾನಭಂಗಕ್ಕೆ ಯತ್ನಿಸಿದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಬಂಧಿತರಾದ ಆರೋಪಿಗಳು ಮಾನಭಂಗಕ್ಕೆ ಯತ್ನಿಸಿದ ಆರೋಪಿಯಾದ ಆಪೀದ್ ನನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿ ಕುಮಾರಧಾರ ಜಂಕ್ಷನ್ ಹತ್ತಿರ ಇರುವ ಹಳೆ ಕಟ್ಟಡದ ಕೋಣೆಯೊಳಗೆ ಕೂಡಿಹಾಕಿದ್ದರು. ಬಳಿಕ 10 ರಿಂದ 12 ಜನರು ಕೈಯಲ್ಲಿ, ಮರದ ದೊಣ್ಣೆಯಲ್ಲಿ ಮತ್ತು ಬೆತ್ತಗಳಿಂದ ಹೊಡೆದಿದಲ್ಲದೆ ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ, ಜೀವ ಬೆದರಿಕೆ ಹಾಕಿದ್ದರು. ಅಲ್ಲದೆ ಆತನ ಮೊಬೈಲ್ ಪರ್ಸ್ ಮತ್ತು ಚೀಲವನ್ನು ಕಸಿದುಕೊಂಡಿದ್ದರು.
ಈ ಹಿನ್ನಲೆ ಆರೋಪಿಗಳ ವಿರುದ್ಧ ಐಪಿಸಿ ಕಲಂ 323, 324, 307, 365, 143, 147, 149 ರಂತೆ ಸುಬ್ರಹ್ಮಣ್ಯ ಪೊಲೀಸರ ಪ್ರಕರಣ ದಾಖಲಿಸಿ ದಿನಾಂಕ ಜನವರಿ 6ರಂದು ಬಂಧಿಸಿದ್ದರು.
ಇದೀಗ ಬಂಧಿತರಾದ ರಾಧಾಕೃಷ್ಣ ಮತ್ತು ವಿಶ್ವಾಸ್ ಇವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿಗಳ ಪರವಾಗಿ ಕಿಶೋರ್ ಕುಮಾರ್ ಮಂಗಳೂರು, ಚಿನ್ಮಯ್ ರೈ ಈಶ್ವರಮಂಗಲ ಮತ್ತು ಹರೀಶ್ ಬೂಡುಪನ್ನೆ ವಾದಿಸಿದ್ದರು.