Ad Widget .

ತೆಂಗಿನಮರ ಏರಿದಾತ ಮರದಲ್ಲೇ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ತೆಂಗಿನ ಮರ ಹತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಫೆ.6 ರ ಬೆಳಗ್ಗೆ 7.30ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಮೈಲಸಂದ್ರದ ವಿಜಯಶ್ರೀ ಲೇಔಟ್‍ನ ವೆಂಕಟರಮಣ ದೇವಸ್ಥಾನದ ಸಮೀಪ ಸುಮಾರು 40 ಅಡಿ ಎತ್ತರದ ಮರದಲ್ಲಿ ತೆಂಗಿನ ಕಾಯಿ ಕೀಳಲು ನಾರಾಯಣಪ್ಪ ಎಂಬವರು ಹತ್ತಿ ತೆಂಗಿನ ಗರಿ ಮೇಲೆ ಕುಳಿತಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.

Ad Widget . Ad Widget .

ಹಲವು ಬಾರಿ ಕೂಗಿದರೂ ನಾರಾಯಣ ಕೆಳಗೆ ಇಳಿಯದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕದಳ, ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *