Ad Widget .

ನೀವು ನೋಡಿದ್ದು ಕಾಂತಾರ 2 ; ಕಾಂತಾರ 1 ಇನ್ಮುಂದೆ ಬರುತ್ತೆ! | ಟ್ವಿಸ್ಟ್ ಕೊಟ್ಟ‌ ರಿಷಭ್‌ ಶೆಟ್ಟಿ

ಸಮಗ್ರ ನ್ಯೂಸ್: ಕಾಂತಾರ 2 ಚಿತ್ರ ತಯಾರಾಗುತ್ತಿದೆ ಎಂದು ಬಹಳ ದಿನಗಳ ಹಿಂದೆಯೇ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ಖಚಿತಪಡಿಸಿದ್ದರು. ನಿರ್ದೇಶಕ ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕಾಂತಾರ 2 ಬಗ್ಗೆ ಮಾತನಾಡಿದ್ದಾರೆ.

Ad Widget . Ad Widget .

ಕಾಂತಾರ ಶತದಿನೋತ್ಸವ ಸಂಭ್ರಮದಲ್ಲಿ ಈ ಬಗ್ಗೆ ರಿಷಬ್ ಹೇಳಿದ್ದು, ಎಲ್ಲರಿಗೂ ಆಶ್ಚರ್ಯವಾಗಿದೆ. ಯಾವುದೇ ಸಿನಿಮಾದ ಭಾಗ 2 ಎಂದರೆ ಅಂದರೆ ಅದು ಕಥೆಯ ಮುಂದುವರೆದ ಭಾಗವನ್ನು ಹೇಳುತ್ತದೆ. ಆದರೆ ಕಾಂತಾರ ಸಿನಿಮಾದ ವಿಚಾರದಲ್ಲಿ ಹಾಗಲ್ಲ. ಕಾಂತಾರ ಸೀಕ್ವೆಲ್ ಬದಲು ರಿಷಬ್‌ ಶೆಟ್ಟಿ ಪ್ರೀಕ್ವೆಲ್ ಹೇಳಲು ಹೊರಟಿದ್ದಾರೆ.

Ad Widget . Ad Widget .

ಕಾಂತಾರ 100 ದಿನಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ಕಾಂತಾರ 2 ಖಂಡಿತವಾಗಿಯೂ ತಯಾರಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ. ಈ ಸಿನಿಮಾ ಅಂತರಾಷ್ಟ್ರೀಯಮಟ್ಟಕ್ಕೆ ಹೋಗಲು ಕಾರಣ ಪ್ರೇಕ್ಷಕರು. ಅವರನ್ನು ಮರೆಯುವಂತಿಲ್ಲ. ಎಲ್ಲರಿಗೂ ಧನ್ಯವಾದ. ಮಾಧ್ಯಮ ಹಾಗೂ ನಮ್ಮ ತಂಡದ ಎಲ್ಲರ ಸಹಕಾರದಿಂದ ಇಷ್ಟು ದೊಡ್ಡಮಟ್ಟಕ್ಕೆ ಸಿನಿಮಾ ತಲುಪಿದೆ. ಕಾಂತಾರ – 2 ಯಾವಾಗ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ನೀವು ನೋಡಿರೋ ಸಿನಿಮಾನೇ ಕಾಂತಾರ ಪಾರ್ಟ್ 2. ಅತಿ ಶೀಘ್ರದಲ್ಲೇ ಕಾಂತಾರ ಪಾರ್ಟ್‌ – 1 ಬರುತ್ತದೆ. ಅಷ್ಟು ಮಾತ್ರ ಈಗ ನಾನು ಹೇಳಬಹುದು ಎಂದು ರಿಷಬ್‌ ಹೇಳಿದ್ದಾರೆ.

ಸಿನಿ ಅಭಿಮಾನಿಗಳು ಕಾಂತಾರ 2 ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಈಗ ಅದಕ್ಕೆ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಸಿನಿಮಾ ಸದ್ಯ ಆಸ್ಕರ್‌ ರೇಸ್‌ನಲ್ಲಿದೆ. ಹಲವು ದಾಖಲೆಗಳನ್ನು ಕಾಂತಾರ ಸಿನಿಮಾ ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆಯನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ.

Leave a Comment

Your email address will not be published. Required fields are marked *