Ad Widget .

ಮುಂದುವರಿದ ಮರಣ ಮೃದಂಗ| ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ| ಕಂಪಿಸುತ್ತಲೇ ಇದೆ ಟರ್ಕಿ..!

ಸಮಗ್ರ ನ್ಯೂಸ್: ಟರ್ಕಿ ಹಾಗೂ ಸಿರಿಯಾದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪ ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 1200ಕ್ಕೆ ಏರಿಕೆಯಾಗಿದ್ದು, ಪ್ರಬಲ ಭೂಕಂಪನದ ನಂತರ ಸುಮಾರು 40 ಬಾರಿ ಕಂಪನಗಳು ಸಂಭವಿಸಿವೆ.

Ad Widget . Ad Widget .

ಈಜಿಪ್ಟನ್ ನ ಸೈಪ್ರಸ್ ಎಂಬ ದ್ವೀಪದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದ್ದು, ಭೂಮಿಯಿಂದ 17.9 ಕಿ.ಮೀ. ಆಳದಲ್ಲಿ ಭೂಮಿ ನಡುಗಿದೆ.

Ad Widget . Ad Widget .

ಭೂಕಂಪನದಲ್ಲಿ ಟರ್ಕಿಯಲ್ಲಿ 1720ಕ್ಕೂ ಹೆಚ್ಚು ಕಟ್ಟಡಗಳು ಧರೆಗುರುಳಿದಿದ್ದು, 912 ಮಂದಿ ಮೃತಪಟ್ಟಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 130 ಕಟ್ಟಡಗಳು ಭಾಗಶಃ ಹಾನಿಯಾಗಿದ್ದರೆ, 16 ಕಟ್ಟಡಗಳು ಸಂಪೂರ್ಣ ಕುಸಿದಿವೆ.

ಸಿರಿಯಾದಲ್ಲಿ ಕೂಡ 326ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 600 ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ಆವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ತಳಿಸಿವೆ.

ಸ್ಥಳೀಯ ಕಾಲಮಾನ ಪ್ರಕಾರ ಸೋಮವಾರ ಮುಂಜಾನೆ 4.17ರ ಸುಮಾರಿಗೆ ಪ್ರಬಲ ಭೂಕಂಪನ ಸಂಭವಿಸಿದೆ. ಮೊದಲ ಭೂಕಂಪನ 6.7ರಷ್ಟು ತೀವ್ರತೆಯಲ್ಲಿ ದಾಖಲಾಗಿದ್ದು, 15 ನಿಮಿಷಗಳ ನಂತರ ಮತ್ತೊಂದು ಮತ್ತು ಅದಕ್ಕಿಂತ ಭೀಕರ ಭೂಕಂಪನ ಸಂಭವಿಸಿದೆ.

Leave a Comment

Your email address will not be published. Required fields are marked *