Ad Widget .

‘ಇಸ್ಲಾಂಗೆ ಬಾ, ಇಲ್ಲವಾದಲ್ಲಿ ಶ್ರದ್ದಾಳಂತೆ ಸಾಯಲು‌ ಸಿದ್ದಳಾಗು’| ಅತ್ಯಾಚಾರವೆಸಗಿ ಬೆದರಿಕೆ ಒಡ್ಡುತ್ತಿದ್ದ ಮುಸ್ಲಿಂ ಯುವಕನ ಬಂಧನ

ಸಮಗ್ರ ನ್ಯೂಸ್: ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವೆಸಗಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ ಮುಸ್ಲಿಂ ಯುವಕನನ್ನು ಬಂಧಿಸಲಾಗಿದೆ.

Ad Widget . Ad Widget .

ಅಲಿಖಾನ್ ಎಂಬ ಹೆಸರಿನ ಸುಳ್ಳು ಗುರುತಿನ ಮೂಲಕ 11ನೇ ತರಗತಿಯ ಯುವತಿಯನ್ನು ಹಿಂಬಾಲಿಸುವ ಮೂಲಕ ಪರಿಚಯಿಸಿಕೊಂಡಿದ್ದಾನೆ. ಆಕೆಯೊಂದಿಗೆ ಸ್ನೇಹ ಬೆಳೆಸಿದ ನಂತರ ಗೌತಮ್ ಬುದ್ಧ ನಗರಕ್ಕೆ ಕರೆದೊಯ್ದು ಸಂತ್ರಸ್ತೆಗೆ ಮದ್ಯಪಾನ ಮಾಡಿಸಿ ಅತ್ಯಾಚಾರವೆಸಗಿದ್ದಾನೆ. ನಂತ್ರ, ಪದೇ ಪದೇ ಲೈಂಗಿಕ ಕಿರುಕುಳ ನೀಡಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾನೆ.

Ad Widget . Ad Widget .

ನಂತರ, ಸಂತ್ರಸ್ತೆಗೆ ಅವನ ಹೆಸರು ಅಮಾನ್, ಅಲಿ ಖಾನ್ ಅಲ್ಲ ಎಂದು ಗೊತ್ತಾಗಿದೆ. ಇದರಿಂದ ನೊಂದ ಸಂತ್ರಸ್ತೆ ನಡೆದ ಪೂರ್ತಿ ವಿಷಯವನ್ನು ಕುಟುಂಬಕ್ಕೆ ತಿಳಿಸಿದಳು, ಆದರೆ ಈ ಘಟನೆಯು ತಮ್ಮ ಖ್ಯಾತಿಗೆ ಧಕ್ಕೆಯಾಗಬಹುದೆಂದು ಅವರು ಆತಂಕಗೊಂಡಿದ್ದರಿಂದ ಅವರು ದೂರು ದಾಖಲಿಸಲು ಹೆದರುತ್ತಿದ್ದರು.

ಜನವರಿ 23ರಂದು ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಅಮಾನ್ ಆಕೆಯನ್ನು ಅಪಹರಿಸಿ ಮತ್ತೆ ಅತ್ಯಾಚಾರ ಎಸಗಿದ್ದ. ಅಸ್ವಾಭಾವಿಕ ಲೈಂಗಿಕತೆಯನ್ನು ಹೊಂದಿದ್ದ ಆತ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವಂತೆ ಬೆದರಿಕೆ ಹಾಕಿದ್ದಾನೆ. ಇಲ್ಲವಾದರೆ, ನಿನ್ನ ದೇಹವನ್ನು ಶ್ರದ್ಧಾ ವಾಕರ್‌ನಂತೆ ತುಂಡು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದರಿಂದ ಹೆದರಿದ ಸಂತ್ರಸ್ತೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *