Ad Widget .

ಹಿರಿಯ ಗಾಯಕಿ‌ ವಾಣಿ ಜಯರಾಂ ಸಾವು ಸಂಭವಿಸಿದ್ದು ಹೇಗೆ ಗೊತ್ತಾ? ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಬಯಲಾಯ್ತು ಅಸಲಿ ಸತ್ಯ

ಸಮಗ್ರ ನ್ಯೂಸ್: ಹಿರಿಯ ಗಾಯಕಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ಭಾನುವಾರ ಅವರ ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದೆ. ಜೊತೆಗೆ ಅದರೊಂದಿಗೆ ಮನೆಯ ಹಾಗೂ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ ಪೊಲೀಸರು ಹಿರಿಯ ಗಾಯಕಿ ಸಾವಿನ ಕೇಸ್‌ ಕುರಿತು ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ.

Ad Widget . Ad Widget .

ವಾಣಿ ಜಯರಾಮ್ ಅವರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪೋಸ್ಟ್ ಮಾರ್ಟಮ್‌ ವರದಿ ತಿಳಿಸಿದೆ. ಅವರು ತಮ್ಮ ಹಾಸಿಗೆಯ ಬಳಿ ಹಳೆಯ ಮರದ ಮೇಜಿನ ಮೇಲೆ ಜಾರಿ ಬಿದ್ದಿದ್ದರು. ಮೇಜಿನ ಮೇಲೂ ರಕ್ತದ ಕಲೆ ಇತ್ತು. ಟೇಬಲ್ 2 ಅಡಿ ಎತ್ತರವಿದೆ. ಮೇಜಿಗೆ ಬಿದ್ದ ನಂತರ ಅವರ ಹಣೆಯಿಂದ ಭಾರೀ ರಕ್ತಸ್ರಾವವಾಗಿದೆ. ಅವರ ಹಣೆಯ ಮೇಲೆ ಗಾಯವಾಗಿದ್ದೂ ಕಾಣುತ್ತಿತ್ತು. ಸಿಸಿಟಿವಿಯನ್ನು ವೀಕ್ಷಿಸಿದಾಗ ಆಕೆಯ ಮನೆಗೆ ಹೊರಗಿನವರು ಯಾರೂ ಬಂದಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget . Ad Widget .

ಶನಿವಾರ ಅವರ ಮನೆಯ ಕೆಲಸದ ಹೆಂಗಸು ಮಲರ್‌ಕೋಡಿ ಸಾಕಷ್ಟು ಬಾರಿ ಮನೆಯ ಬೆಲ್‌ ಬಾರಿಸಿದರೂ, ವಾಣಿ ಜಯರಾಮ್‌ ಬಾಗಿಲು ತೆಗೆಯದ ಕಾರಣ, ಅವರ ಸಂಬಂಧಿಗಳು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊನೆಗೆ ಬದಲಿ ಕೀ ಬಳಸಿ ಮನೆಯ ಬಾಗಿಲು ತೆಗೆದಾಗ, ವಾಣಿ ಜಯರಾಮ್‌ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿತ್ತು.

Leave a Comment

Your email address will not be published. Required fields are marked *