Ad Widget .

ಕಾಂಗ್ರೆಸ್ ಪಕ್ಷದ ತಾಯಿ ಬಂಜೆಯಾಗಿದೆ, ಮಕ್ಕಳು ಹುಟ್ಟಲಾರವು – ಲಕ್ಷ್ಮಣ್ ಸವದಿ‌

ಸಮಗ್ರ ನ್ಯೂ ಸ್: ಕಾಂಗ್ರೆಸ್ ನವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ತಾಯಿ ಬಂಜೆಯಾಗಿದೆ, ಮಕ್ಕಳು ಹುಟ್ಟುವ ಪ್ರಶ್ನೆಯಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಲೇವಡಿ ಮಾಡಿದ್ದಾರೆ.

Ad Widget . Ad Widget .

ರಾಜ್ಯದಲ್ಲಿ ಕೇವಲ 50 ದಿನದಲ್ಲಿ ಬಿಜೆಪಿ ಸರ್ಕಾರ ಉರುಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಈ ವಿಚಾರದಲ್ಲಿ ಸವದಿ ಅಥಣಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.

Ad Widget . Ad Widget .

ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ನವರರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ತಾಯಿ ಬಂಜೇಯಾಗಿದೆ. ಇಲ್ಲಿ ಮಕ್ಕಳು ಹುಟ್ಟು ಪ್ರಶ್ನೆ ಉದ್ಭವವಾಗುವುದಿಲ್ಲ. ಕಾಂಗ್ರೆಸ್ ನವರು ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಈಗಾಗಲೇ ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಆ ಎರಡು ಹೇಳಿಕೆ ನೀವು ಗಮನಿಸಿರಬಹುದು, ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವೈಯಕ್ತಿಕ ವಿವಾದ. ಈ ವಿಚಾರಗಳು ಬಿಜೆಪಿ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧಿಸಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಸಿಬಿಐ ತನಿಖೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸವದಿ ಹೇಳಿದರು.

ಪ್ರಶಾಂತ್, ಸಮಗ್ರ ನ್ಯೂಸ್ ಬೆಳಗಾವಿ

Leave a Comment

Your email address will not be published. Required fields are marked *