Ad Widget .

ಮಂಗಳೂರು ಹುಡುಗನ ಮದ್ವೆಯಾದ ನೆದರ್ಲೆಂಡ್ ಹುಡುಗಿ

ಸಮಗ್ರ ನ್ಯೂಸ್: ಯಾರಿಗೆ ಯಾರ ಮೇಲೆ ಯಾವಾಗ ಪ್ರೀತಿ ಹುಟ್ಟುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಮದುವೆ. ಕಳೆದ ವರ್ಷ ಬೆಲ್ಜಿಯಂ ದೇಶದ ಹುಡುಗಿಯೊಬ್ಬಳು ಹಂಪಿಯ ಆಟೋ ಚಾಲಕನನ್ನು ಪ್ರೀತಿಸಿ ಮದುವೆ ವಿವಾಹವಾಗಿದ್ದಳು. ಇದೀಗ ನೆದರ್ಲೆಂಡ್​ನ ಯುವತಿಯೊಬ್ಬಳು ಮಂಗಳೂರಿನ ಯುವಕನೊಂದಿಗೆ ಮದುವೆ ಆಗಿದ್ದಾಳೆ.

Ad Widget . Ad Widget .

ಮಂಗಳೂರಿನ ಯುವಕ ನೆದರ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಲ್ಲಿನ ಹುಡುಗಿಯೊಂದಿಗೆ ಪ್ರೇಮಾಂಕುರವಾಗಿದೆ. ಇದೀಗ ಇಬ್ಬರೂ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಸುರತ್ಕಲ್​ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

Ad Widget . Ad Widget .

ಮುಸ್ಲಿಂ ಸಂಪ್ರದಾಯದಂತೆ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆದಿದೆ. ಯುವತಿಯ ಕುಟುಂಬಸ್ಥರು ಭಾರತೀಯ ಸಂಸ್ಕೃತಿಯಂತೆ ಸೀರೆ ಉಟ್ಟು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಈ ಜೋಡಿಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಮದುವೆ ಬಳಿಕ ಹುಡುಗನ ಹಿರಿಯಜ್ಜಿ ಭಾಷೆ ತಿಳಿಯದೆ ಮದುವೆ ಹೆಣ್ಣಿನ ಕುಟುಂಬಸ್ಥರ ಜತೆಗೆ ಮಾತನಾಡಲು ಪ್ರಯತ್ನಿಸಿದ್ದಾರೆ, ಈ ತಮಾಷೆಯ ವಿಡಿಯೋ ನೋಡುಗರಲ್ಲಿ ನಗು ತರಿಸಿದೆ.

Leave a Comment

Your email address will not be published. Required fields are marked *