Ad Widget .

ಒಂದೇ ಸಮಯಕ್ಕೆ 12 ಮಂದಿ ಜೊತೆ ಚಾಟಿಂಗ್| ಕೆಲಸ ಕೊಡಿಸುವೆಂದು ಕಾಮದಾಹಕ್ಕೆ ಬಳಸಿಕೊಂಡ ಖತರ್ ನಾಕ್| ರೀಲ್ಸ್ ಸ್ಟಾರ್ ಗಳೇ‌ ಈತನ ಟಾರ್ಗೆಟ್!!

ಸಮಗ್ರ ನ್ಯೂಸ್: ಒಳ್ಳೆ ಕೆಲಸ, ಕೈತುಂಬ ಸಂಬಳ, ಹೇಳಿಕೊಳ್ಳೊಕೆ ಯಾವುದೂ ಸಮಸ್ಯೆ ಇಲ್ಲದ ವ್ಯಕ್ತಿಗೆ ಕಾಮದ ಹುಚ್ಚು ತಲೆಗೇರಿದರೆ ಆಗೋದೇನು ಎಂಬುವುದಕ್ಕೆ ಈ ಘಟನೆ ಸಾಕ್ಷಿ. ಈತನ ಮೈಗಂಟಿದ ಕಾಮದ ಹುಚ್ಚು ಅಮಾಯಕ ಹೆಣ್ಣು ಮಕ್ಕಳ ಕಡೆ ತಿರುಗಿತ್ತು. ಜಾಗತೀಕರಣಗೊಂಡ ಸೋ ಕಾಲ್ಡ್ ಜಮಾನದಲ್ಲಿ ಹೆಣ್ಣು ಮಕ್ಕಳು ಮಾಡೊ ರೀಲ್ಸ್, ಡ್ಯಾನ್ಸ್‌ಗಳು ಆತನ ಹುಚ್ಚಿಡಿಸಿದ್ದವು. ಹಾಗಂತೆ ಈತ ಅವರಿಗೆ ಬಲೆ ಹಾಕುತ್ತಿರಲಿಲ್ಲ. ಅಮಾಯಕ ಹಾಗೂ ಕೆಲಸ ಹುಡುಕುವ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುತಿದ್ದ.

Ad Widget . Ad Widget .

ಇನ್ನು ಈತನ ಮೆಸೆಜ್ ಗಳನ್ನು ನಂಬುತಿದ್ದ ಅಕೆ ಎಲ್ಲೋ ಒಂದು ಕಡೆ ತನಗೂ ಕೆಲಸ ಸಿಗಬಹುದೆಂಬ ನಂಬಿಕೆಯಲ್ಲಿದ್ದಳು. ಇದಕ್ಕಾಗಿ ಆಕೆ ಸಹ ತಾನು ಏನು ಮಾಡಬೇಕು ಅಂತ ಆತನಿಗೆ ಕೇಳಿ ಬಿಟ್ಟಿದ್ದಳು. ಅಲ್ಲಿಗೆ ಪ್ರಸಾದನ ಹೊಸ ಗೇಮ್ ಶುರುವಾಗಿತ್ತು. ಅಲ್ಲಿಗೆ ಆತನ ಅಸಲೀ ಮುಖವಾಡ ಕಳಚುತ್ತಾ ಬಂದಿದೆ. ಇದನ್ನು ಸೂಕ್ಷ್ಮವಾಗಿಯೇ ಅರಿತ ಯುವತಿಯೂ ಚಾಣಾಕ್ಷ ಹೆಜ್ಜೆಯನ್ನಿಟ್ಟಿದ್ದಾಳೆ.

Ad Widget . Ad Widget .

ಫೇಕ್‌ ಅಕೌಂಟ್‌ನಿಂದ ಚಾಟಿಂಗ್: ಕೆಲಸ ಕೊಡಿಸೋ ನೆಪದಲ್ಲಿ ಫೇಕ್ ಅಕೌಂಟ್‌ನಿಂದ ಚಾಟ್ ಮಾಡೋ ಈ ಕಾಮುಕ ನಂತರ ನಿಧಾನವಾಗಿ ಆಕೆಯನ್ನ ತನ್ನ ಬುಟ್ಟಿಗೆ ಬೀಳಿಸಿಕೊಳ್ತಾನೆ.ಆಕೆಯನ್ನ ಪುಸಲಾಯಿಸಿ ಆಕೆಯ ಅರೆಬೆತ್ತಲೆ ಫೋಟೋಗಳನ್ನ ಕಳಿಸು ಅಂತ ಕೇಳ್ತಾನೆ.. ಆಕೆ ಕೂಡ ಹುಡುಗಿ ತಾನೇ ಕೇಳ್ತಿರೋದು ಅಂತ ಅಂದುಕೊಂಡು ಈತನಿಗೆ ಆಕೆಯ ನಗ್ನ ಫೋಟೋಗಳನ್ನ ಕಳಿಸಿಬಿಡ್ತಾಳೆ.. ಅಷ್ಟೇ.. ಅಲ್ಲಿಗೆ ಅವಳು ಟ್ರಾಪ್ ಆದಳು ಅಂತಲೇ ಅರ್ಥ.. ಇಂಟರ್ವ್ಯೂವ್ ಇದೆ ಬಾ ಅಂತ ಈತ ತನ್ನಲ್ಲಿಗೆ ಕರೆಸಿಕೊಳ್ತಿದ್ದನು… ಅದೂ ಎಲ್ಲಿಗೆ..? ಓಯೋ ರೂಮ್ಸ್ಗೆ.. ಹೀಗೆ ಈ ಪಾಪಿ ಅದೆಷ್ಟು ಹುಡುಗಿಯರ ಜೀವನದಲ್ಲಿ ಆಟವಾಡಿದ್ದಾನೆ ಗೊತ್ತಾ..? ಬರೊಬ್ಬರಿ 12 ಯುವತಿಯರನ್ನ ಕೆಡಿಸಿದ್ದಾನೆ.

ಸದ್ಯ ಈ ಕಾಮುಕನ ವಂಚನೆಯ ಜಾಲದ ವಿರುದ್ಧ ಬಂದ ಓರ್ವ ಮಹಿಳೆಯಿಂದ ಈತ ಆಟ ಬಯಲಾಗಿದೆ.. ರೈತನ‌ ಮಗನಾಗಿದ್ದ ಈತ ಕಾಮ ಪಿಶಾಚಿಯಾಗಿ ಅದೆಷ್ಟೊ ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಾನೆ.. ಸದ್ಯ ಪೊಲೀಸರು ಇನ್ನೂ ತನಿಖೆ ನಡೆಸುತಿದ್ದು, ಮತ್ತಷ್ಟು ವಂಚನೆ ಪ್ರಕರಣ ಬಯಲಾಗೊ ಸಾಧ್ಯತೆಗಳಿವೆ.. ಆದ್ರೆ ಈ ಸೋಷಿಯಲ್ ಮೀಡಿಯಾದಲ್ಲಿ 24 ಗಂಟೆ ತಲ್ಲೀನ ಅಗಿರುವ ನಮ್ಮ ಹೆಣ್ಣು ಮಕ್ಕಳೇ ಯಾವುದೇ ಮೆಸೆಜ್ ಅಥವಾ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಮೊದಲು ಹುಷಾರ್ ಆಗಿರಿ.

Leave a Comment

Your email address will not be published. Required fields are marked *