Ad Widget .

ಏರ್‌ಫಿಲ್ಟರ್‌ಗಳು ಕಲುಷಿತಗೊಂಡರೆ ಈ ಪರಿಣಾಮ ಉಂಟಾಗ ಬಹುದು

ಸಮಗ್ರ ಸಮಾಚಾರ: ವಾಹನಗಳ ಏರ್‌ಫಿಲ್ಟರ್‌ಗಳು ಕಲುಷಿತಗೊಂಡರೆ ಕಾರ್ ಎಂಜಿನ್ ಆಪರೇಟಿಂಗ್ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ನಿಯಮಿತವಾಗಿ ಆಗಾಗ ಏರ್‌ಫಿಲ್ಟರ್‌ಗಳನ್ನು ಬದಲಾಯಿಸುವುದು ಅಗತ್ಯವಾಗಿರುತ್ತದೆ.

Ad Widget . Ad Widget .

ಒಂದು ವೇಳೆ ಎಂಜಿನ್ ಕೆಟ್ಟರೆ ಕಾರಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಏರ್‌ ಫಿಲ್ಟರ್‌ಗಳ ಬಗ್ಗೆ ಗಮನವಿರಬೇಕು ಹಾಗೂ ಯಾವಾಗ ಬಲಿಸಬೇಕು ಎಂಬುದನ್ನು ತಿಳಿದಿರಬೆಕು. ಆದರೆ ಏರ್‌ಫಿಲ್ಟರ್‌ಗಳನ್ನು ಯಾವಾಗ ಬದಲಾಯಿಸಬೇಕು ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. ಇಂತಹ ಸಂದರ್ಭಗಳನ್ನು ಕೆಲವು ಮುನ್ಸೂಚನೆಗಳ ಮೂಲಕ ತಿಳಿದುಕೊಳ್ಳಬೇಕು. ಏರ್‌ ಫಿಲ್ಟರ್ ಬಣ್ಣ ಬದಲಾಗುವುದು, ಇಂಧನ ಹೆಚ್ಚಾಗಿ ಕುಡಿಯುವಂತಹ ಹಲವು ಮುನ್ಸೂಚನೆಗಳನ್ನು ನೀಡುತ್ತದೆ. ಅಂತಹ ಕೆಲವನ್ನು ಇಲ್ಲಿ ನೋಡಣ.

Ad Widget . Ad Widget .

ಕಡಿಮೆ ಮೈಲೇಜ್
ಆರಂಭದಲ್ಲಿ ಹೇಳಿದಂತೆ ಕಾರು ಮತ್ತು ಏರ್‌ಫಿಲ್ಟರ್‌ನ ಮೈಲೇಜ್ ಬಹಳ ನಿಕಟಸಂಬಂಧ ಹೊಂದಿರುತ್ತವೆ. ಅಂದರೆ ಎಂಜಿನ್ ಒಳಗೆ ನುಸುಳುವ ಗಾಳಿಯನ್ನು ಫಿಲ್ಟರ್ ನೇರವಾಗಿ ಕಾರಿನ ಎಂಜಿನ್‌ಗೆ ಹರಿಯದಂತೆ ತಡೆದು ಫಿಲ್ಟರ್‌ ಮಾಡುತ್ತದೆ. ಒಂದು ವೇಳೆ ಏರ್‌ಫಿಲ್ಟರ್‌ ಕೆಟ್ಟಿದ್ದರೆ ಎಂಜಿನ್‌ಗೆ ಚಲಿಸಲು ಬೇಕಾದ ಗಾಳಿ ಸಿಗುವುದಿಲ್ಲ, ಇದರಿಂದ ಹೆಚ್ಚು ಇಂಧನವನ್ನು ಕುಡಿಯುತ್ತದೆ. ಇದರಿಂದ ನಿಮ್ಮ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ. ಆದ್ದರಿಂದ ಕಾರಿನ ಮೈಲೇಜ್ ಇದ್ದಕ್ಕಿದ್ದಂತೆ ಕಡಿಮೆಯಾದರೂ, ಏರ್‌ಫಿಲ್ಟರ್‌ಗಳಲ್ಲಿ ಸಮಸ್ಯೆ ಇದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು.

ಕಳಪೆ ಪ್ರದರ್ಶನ:
ನಿರಂತರವಾಗಿ ಕಾರನ್ನು ಚಾಲನೆ ಮಾಡುತ್ತಿದ್ದರೆ, ಅದರ ಕಾರ್ಯಕ್ಷಮತೆ ಹೇಗಿರುತ್ತದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಒಂದು ವೇಳೆ ಕಾರ್ಯನಿರ್ವಹಣೆಯಲ್ಲಿ ಹಠಾತ್ ಬದಲಾವಣೆಯಾದರೆ, ಅದು ಏರ್‌ಫಿಲ್ಟರ್ ಸಮಸ್ಯೆಗಳಿಂದಾಗಿರಬಹುದು. ಇದರರ್ಥ ಎತ್ತರ ಪ್ರದೇಶಗಳನ್ನು ಏರುವಾಗ ಕಾರು ವೇಗವಾಗಿ ಚಲಿಸಲು ಹೆಣಗಾಡುತ್ತದೆ ಅಥವಾ ಎಡವುತ್ತಿದೆ ಎಂಬುದನ್ನು ಗಮನಿಸಬೇಕು. ನಿತ್ಯ ಓಡಿಸುವ ನಿಮಗೆ ವಾಹನದಲ್ಲಿನ ಬದಲಾವಣೆ ಸರಳವಾಗಿ ಗೊತ್ತಾಗುತ್ತದೆ. ಹೀಗಿದ್ದಾಗ ಏರ್‌ಫಿಲ್ಟರ್‌ ಅನ್ನು ಒಮ್ಮೆ ಪರಿಶೀಲಿಸಿ.

ಬಣ್ಣ ಬದಲಾದಾಗ ಏರ್‌ಫಿಲ್ಟರ್ ಬದಲಾಯಿಸಿ:
ಏರ್‌ಫಿಲ್ಟರ್ ಕೆಟ್ಟಿರಬಹುದು ಎಂಬ ಅನುಮಾನವಿದ್ದು ಬದಲಾಯಿಸಲು ಬಯಸುತ್ತಿದ್ದರೆ ಅದನ್ನು ತಿಳಿಯಲು ಸರಳ ಮಾರ್ಗವಿದೆ. ಏರ್‌ಫಿಲ್ಟರ್‌ನ ಬಣ್ಣವನ್ನು ಆದರಿಸಿ ಬದಲಿಸಬಹುದು, ಸ್ವಚ್ಛ ಮತ್ತು ತಾಜಾ ಏರ್‌ಫಿಲ್ಟರ್ ಬಿಳಿ ಬಣ್ಣದಲ್ಲಿರುತ್ತದೆ. ಇದನ್ನು ನಾವು ಕಂಡ ಕೂಡಲೇ ನಮಗೆ ತಿಳಿಯುತ್ತದೆ. ಆದರೆ ಕೆಟ್ಟಿರುವ ಏರ್‌ಫಿಲ್ಟರ್‌ ಕೊಳಕು ಸ್ಫಟಿಕ ಕಪ್ಪು ಬಣ್ಣಕ್ಕೆ ಬದಲಾಗಿರುತ್ತದೆ. ಈ ಮೂಲಕ ಬದಲಾಯಿಸುವ ಸಮಯ ಬಂದಿದೆ ಎಂದರ್ಥ. ಕೂಡಲೇ ಇದನ್ನು ಬದಲಾಯಿಸಿದರೆ ಎಂಜಿನ್‌ ಅನ್ನು ಕಾಪಾಡಿಕೊಳ್ಳಬಹುದು.

ಎಂಜಿನ್ ಲೈಟ್ ಪರಿಶೀಲಿಸಿ:
ಕೆಲವೊಮ್ಮೆ ಚೆಕ್ ಎಂಜಿನ್ ಲೈಟ್ ನಿಮ್ಮ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಇರಬಹುದು. ಈ ಬೆಳಕು ಉರಿಯುತ್ತಿದ್ದರೆ ಅದಕ್ಕೆ ಬೇರೆ ಬೇರೆ ಅರ್ಥಗಳಿರಬಹುದು. ಏರ್‌ಫಿಲ್ಟರ್ ಸಮಸ್ಯೆ ಅವುಗಳಲ್ಲಿ ಒಂದಾಗಿರಬಹುದು. ಆದ್ದರಿಂದ ಚೆಕ್ ಎಂಜಿನ್ ಲೈಟ್ ಆನ್ ಆಗಿದ್ದರೆ, ನೀವು ಹೆಚ್ಚಿನ ಗಮನ ಹರಿಸಬೇಕು. ಅದನ್ನು ಹಾಗೆಯೇ ಬಿಡಬೇಡಬಾರದು. ಏರ್‌ಫಿಲ್ಟರ್ ಅನ್ನು ಬದಲಾಯಿಸಲು ಕಡಿಮೆ ವೆಚ್ಚವಾಗುತ್ತದೆ. ಎಂಜಿನ್ ಸಮಸ್ಯೆಗಳು ಬಂದಾಗ ಖರ್ಚಾಗುವುದಕ್ಕೆ ಹೋಲಿಸಿದರೆ ಏರ್‌ಫಿಲ್ಟರ್ ಅನ್ನು ಬದಲಾಯಿಸುವ ವೆಚ್ಚ ಕಡಿಮೆ. ಆದ್ದರಿಂದ ಉದಾಸೀನ ಮಾಡಬಾರದು.

ಅಸಾಮಾನ್ಯ ಎಂಜಿನ್ ಶಬ್ದ:
ಕಾರುಗಳು ವಿವಿಧ ರೀತಿಯ ಶಬ್ದಗಳನ್ನು ಮಾಡುತ್ತವೆ. ನೀವು ಪ್ರತಿಯೊಂದರ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೂ ಕಾರು ಹೈಡ್ಲಿಂಗ್‌ನಲ್ಲಿರುವಾಗ ಇದ್ದಕ್ಕಿದ್ದಂತೆ ವಿಚಿತ್ರ ಶಬ್ದ ಬಂದರೆ ಅದನ್ನು ಗಮನಿಸಬೇಕು. ಬಹುಶಃ ಇದು ಏರ್‌ಫಿಲ್ಟರ್ ಅನ್ನು ಬದಲಾಯಿಸಬೇಕಾಗಿದೆ ಎಂದು ಬಹಿರಂಗಪಡಿಸುವ ಮುನ್ಸೂಚನೆ ಇರಬಹುದು. ಹಾಗಾಗಿ ನಿತ್ಯ ಓಡಾಡುವ ನಿಮಗೆ ಇಂತಹ ಶಬ್ದಗಳನ್ನು ಗುರ್ತಿಸುವುದು ತುಂಬ ಸುಲಭ. ಒಂದು ವೇಳೆ ಶಬ್ದದಲ್ಲಿ ಬದಲಾವಣೆ ಕಂಡುಬಂದರೆ ಕೂಡಲೇ ಫಿಲ್ಟರ್ ಅನ್ನು ಪರಿಶೀಲಿಸಿ.

Leave a Comment

Your email address will not be published. Required fields are marked *