Ad Widget .

ಕ್ರೂಸರ್ – ಗೂಡ್ಸ್ ವಾಹನದ ಮದ್ಯೆ ಭೀಕರ ಅಪಘಾತ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಕ್ರೂಸರ್ ಮತ್ತು ಗೂಡ್ಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ‌ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಹಟ್ಟಿ – ಸಮೀಪದ ಘಟ್ಟನಟ್ಟಿ ಕ್ರಾಸ್ ಬಳಿ ನಡೆದಿದೆ.

Ad Widget . Ad Widget .

ಕ್ರೂಸರ್ ನಲ್ಲಿದ್ದವರು ಸವದತ್ತಿ ಎಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಸಿಂದಗಿ ತಾಲೂಕಿನ ಭಕ್ತಾದಿಗಳೆಂದು ಗುರುತಿಸಲಾಗಿದೆ. ಕ್ರೂಸರ್ ನಲ್ಲಿದ್ದ 12 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುತ್ತದೆ.

Ad Widget . Ad Widget .

ಗಾಯಾಳುಗಳನ್ನು ಇವರನ್ನು ಅಂಬುಲೆನ್ಸ್ ಮುಖಾಂತರ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *