Ad Widget .

ಕಾಸರಗೋಡು: ಎಸ್. ಐ ಕಿವಿ ಕಚ್ಚಿದ ಆರೋಪಿ

ಸಮಗ್ರ ನ್ಯೂಸ್: ಪೊಲೀಸ್ ಕಸ್ಟಡಿಗೆ ಕರೆದೊಯ್ಯುತ್ತಿದ್ದಾಗ ಆರೋಪಿಯೋರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರ ಕಿವಿಯನ್ನು ಕಚ್ಚಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

Ad Widget . Ad Widget .

ಮಧೂರು ಅರಂತೋಡಿನ ಸ್ಟ್ಯಾನಿ ರೊಡ್ರಿಗಸ್(45) ಈ ಕೃತ್ಯ ನಡೆಸಿದ್ದು, ಕಾಸರಗೋಡು ಠಾಣಾ ಸಬ್ ಇನ್ಸ್ ಪೆಕ್ಟರ್ ಎಂ . ವಿ ವಿಷ್ಣು ನಾಥ್ ರವರ ಕಿವಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಗುರುವಾರ ಸಂಜೆ ಘಟನೆ ನಡೆದಿದೆ.

Ad Widget . Ad Widget .

ಉಳಿಯತ್ತಡ್ಕದಲ್ಲಿ ಸ್ಟ್ಯಾನಿ ಚಲಾಯಿಸುತ್ತಿದ್ದ ಬೈಕ್ ವ್ಯಾನ್ ಗೆ ಡಿಕ್ಕಿಹೊಡೆದಿದೆ. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿದೆ. ಸ್ಟ್ಯಾನಿ ಪಾನಮತ್ತನಾಗಿರುವುದಾಗಿ ಆರೋಪಿಸಿ ಗುಂಪೊಂದು ತಡೆದಿದ್ದು , ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸ್ಟ್ಯಾನಿಯನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿಗೇರಿಸಿ ಠಾಣೆ ಗೆ ಕೊಂಡೊಯ್ಯುತ್ತಿದ್ದಾಗ ಎಸ್.ಐಯವರ ಕಿವಿಗೆ ಕಚ್ಚಿದನೆನ್ನಲಾಗಿದೆ.

ಬಳಿಕ ಎಸ್. ಐ ವಿಷ್ಣುನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಸ್ಟ್ಯಾನಿ ರೊಡ್ರಿಗಸ್ ನನ್ನು ಪೊಲೀಸರು ಬಂಧಿಸಿದರು.

Leave a Comment

Your email address will not be published. Required fields are marked *